ಪಾಕ್ ತನಿಖಾ ತಂಡಕ್ಕೆ ಸ್ವಾಗತ

ಹೊಸದಿಲ್ಲಿ,ಜ.14: ಪಠಾಣ್‌ಕೋಟ್ ದಾಳಿಯ ತನಿಖೆಯ ಅಂಗವಾಗಿ ಸಾಕ್ಷಾಧಾರಗಳನ್ನು ಸಂಗ್ರಹಿಸಲು ತನಿಖಾ ತಂಡವನ್ನು ಭಾರತಕ್ಕೆ ಕಳುಹಿಸುವ ಪಾಕಿಸ್ತಾನದ ನಿರ್ಧಾರವನ್ನು ತಾನು ಬೆಂಬಲಿಸುವುದಾಗಿ ಸರಕಾರವು ಗುರುವಾರ ಹೇಳಿದೆ.
26/11ರ ಮುಂಬೈ ದಾಳಿಗಳ ಬಳಿಕ ಭಾರತದ ಗುಪ್ತಚರ ಅಧಿಕಾರಿಗಳೊಂದಿಗೆ ಕಾರ್ಯಾಚರಿಸಲು ಇಲ್ಲಿಗೆ ತನ್ನ ತನಿಖಾಧಿಕಾರಿಗಳನ್ನು ರವಾನಿಸಲು ಪಾಕಿಸ್ತಾನವು ನಿರಾಕರಿಸಿತ್ತು.
ಇದೇ ವೇಳೆ,ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ಕಾರ್ಯದರ್ಶಿಗಳು ಪರಸ್ಪರ ದೂರವಾಣಿ ಮೂಲಕ ಮಾತನಾಡಿದ್ದು,ಸದ್ಯೋಭವಿಷ್ಯದಲ್ಲಿ ತಮ್ಮ ಮಾತುಕತೆಗೆ ದಿನಾಂಕವನ್ನು ಮರು ನಿಗದಿಪಡಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ ಸ್ವರೂಪ್ ಅವರು ಇಲ್ಲಿ ತಿಳಿಸಿದರು. ಪೂರ್ವ ನಿಗದಿಯಂತೆ ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ಜ.15ರಿಂದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಾಗಿತ್ತು.
Next Story





