ಹಾಲಾಡಿ: ಬಸ್ಸಿನಲ್ಲಿ ಚಿನ್ನಾಭರಣ ಕಳವು
ಬ್ರಹ್ಮಾವರ, ಜ.14: ಬಸ್ಸಿನಲ್ಲಿ ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿಟ್ಟಿದ್ದ ಚಿನ್ನಾಭರಣ ಕಳವಾಗಿರುವ ಘಟನೆ ಜ.9ರಂದು ಹಾಲಾಡಿಯಲ್ಲಿ ನಡೆದಿದೆ.
ನೀಲಾವರ ನಂದನಕುದ್ರುವಿನ ಜೋಸೆಫ್ ಡೋರಾ ಲೂವಿಸ್ ಎಂಬವರ ಪತ್ನಿ ಡಯಾನಾ ಲೂವಿಸ್(32) ಎಂಬವರು ಹೊಸನಗರಕ್ಕೆ ಹನುಮಾನ್ ಬಸ್ಸಿನಲ್ಲಿ ಹೊರಟಿದ್ದು, ಬಸ್ ಹಾಲಾಡಿಯಲ್ಲಿ ಸ್ವಲ್ಪಹೊತ್ತು ನಿಲ್ಲಿಸಿದಾಗ ಡಯಾನ ಬಸ್ಸಿನಿಂದ ಇಳಿದು ಮರಳಿ ಬಂದಾಗ ಬ್ಯಾಗ್‌ನಲ್ಲಿಟ್ಟಿದ್ದ 1.20ಲಕ್ಷ ರೂ. ವೌಲ್ಯದ ಚಿನ್ನಾಭರಣ ಕಳವಾಗಿರುವುದು ಕಂಡುಬಂತು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆೆ
Next Story





