Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾರತದ ಆಧಾರ್‌ಗೆ ವಿಶ್ವಬ್ಯಾಂಕ್ ಶ್ಲಾಘನೆ

ಭಾರತದ ಆಧಾರ್‌ಗೆ ವಿಶ್ವಬ್ಯಾಂಕ್ ಶ್ಲಾಘನೆ

ವಾರ್ತಾಭಾರತಿವಾರ್ತಾಭಾರತಿ14 Jan 2016 11:58 PM IST
share

ವಾಶಿಂಗ್ಟನ್, ಜ.14: ಭಾರತವು ಆಧಾರ್ ಡಿಜಿಟಲ್ ಗುರುತು ಚೀಟಿಯನ್ನು ಉಪಯೋಗಿಸಿ ತನ್ನ ಸಂಪೂರ್ಣ 125 ಕೋಟಿ ಜನಸಂಖ್ಯೆಯನ್ನು ನೋಂದಾಯಿಸುವಲ್ಲಿ ಸರಿಯಾದ ಹಾದಿಯಲ್ಲಿದೆಯೆಂದು ವಿಶ್ವಬ್ಯಾಂಕ್ ಬುಧವಾರ ಹೇಳಿದೆ. ಅದು, ಹಿಂದುಳಿದಿರುವ ಗುಂಪುಗಳನ್ನು ತನ್ನ ಕಲ್ಯಾಣ ಯೋಜನೆಗಳಲ್ಲಿ ಸೇರಿಸಲು ಸರಕಾರಕ್ಕೆ ನೆರವಾಗಲಿದೆಯೆಂದು ಅದು ಅಭಿಪ್ರಾಯಿಸಿದೆ.
ತಂತ್ರಜ್ಞಾನವು ಪರಿವರ್ತನಶೀಲವಾಗಬಲ್ಲದು. ಭಾರತದ ಆಧಾರ್‌ನಂತಹ ಡಿಜಿಟಲ್ ಗುರುತು ವ್ಯವಸ್ಥೆಯೊಂದು, ಜಟಿಲ ಮಾಹಿತಿ ಸಮಸ್ಯೆಯನ್ನು ಮೀರಿ, ಹಿಂದುಳಿದ ಗುಂಪುಗಳ ಒಳಗೊಳಿಸುವಿಕೆಯನ್ನು ಉತ್ತೇಜಿಸ ಬಯಸುವ ಸರಕಾರಗಳಿಗೆ ಸಹಾಯ ಮಾಡಲಿದೆಯೆಂದು ವಿಶ್ವಬ್ಯಾಂಕ್ ತಿಳಿಸಿದೆ.
ಆಧಾರ್ ಐಡಿಯನ್ನು ಬಳಸಿ ಸಂಪೂರ್ಣ 125 ಕೋಟಿ ಜನಸಂಖ್ಯೆಯನ್ನು ನೋಂದಾಯಿಸುವ ಹಾದಿಯಲ್ಲಿ ಭಾರತವಿದೆಯೆಂದು ಸಹ ನಿರ್ದೇಶಕರಾದ ದೀಪಕ್ ಮಿಶ್ರಾ ಹಾಗೂ ಉವ್ ಡಿಚ್ಮನ್ ಸಿದ್ಧಪಡಿಸಿರುವ ತನ್ನ ಹೊಸ ‘ಜಾಗತಿಕ ಅಭಿವೃದ್ಧಿ ವರದಿ-2016: ಡಿಜಿಟಲ್ ಡಿವಿಡೆಂಡ್ಸ್’ ಎಂಬ ವರದಿಯಲ್ಲಿ ವಿಶ್ವಬ್ಯಾಂಕ್ ಹೇಳಿದೆ.

ಅಂತರ್ಜಾಲ, ಮೊಬೈಲ್ ದೂರವಾಣಿ ಹಾಗೂ ಇತರ ಡಿಜಿಟಲ್ ತಂತ್ರಜ್ಞಾನಗಳು ಅಭಿವೃದ್ಧಿಶೀಲ ದೇಶಗಳಲ್ಲಿ ತ್ವರಿತವಾಗಿ ಹರಡುತ್ತಿದ್ದರೂ, ಹೆಚ್ಚಿನ ಬೆಳವಣಿಗೆ, ಹೆಚ್ಚು ಉದ್ಯೋಗ ಹಾಗೂ ಉತ್ತಮ ಸಾರ್ವಜನಿಕ ಸೇವೆಗಳಂತಹ ನಿರೀಕ್ಷಿತ ಡಿಜಿಟಲ್ ಲಾಭಾಂಶಗಳು ನಿರೀಕ್ಷೆಗಿಂತ ಕಡಿಮೆಯಾಗಿವೆ. ವಿಶ್ವದ ಜನಸಂಖ್ಯೆಯ ಶೇ.60ರಷ್ಟು ಭಾಗ, ಸದಾ ವಿಸ್ತರಿಸುತ್ತಿರುವ ಡಿಜಿಟಲ್ ಆರ್ಥಿಕತೆಯಿಂದ ಹೊರಗುಳಿದಿದೆಯೆಂದು ವರದಿ ತಿಳಿಸಿದೆ.

ಡಿಜಿಟಲ್ ತಂತ್ರಜ್ಞಾನಗಳ ವ್ಯಾಪಾರ, ಕೆಲಸ ಹಾಗೂ ಸರಕಾರದ ಪ್ರಪಂಚಗಳನ್ನು ಪರಿವರ್ತಿಸುತ್ತಿವೆಯೆಂದು ವಿಶ್ವಬ್ಯಾಂಕ್ ಗುಂಪಿನ ಅಧ್ಯಕ್ಷ ಜಿಮ್ ಯೋಂಗ್ ಕಿಮ್ ಹೇಳಿದ್ದಾರೆ.
   

ಇಂದು ವಿಶ್ವದ ಶೇ.40 ಜನಸಂಖ್ಯೆ ಅಂತರ್ಜಾಲದ ಮೂಲಕ ಸಂಪರ್ಕ ಹೊಂದಿರುವುದು ವಿಸ್ಮಯಕರ ಬದಲಾವಣೆಯಾಗಿದೆ. ಈ ಸಾಧನೆಯನ್ನು ಆಚರಿಸುವುದರೊಂದಿಗೆ, ನಾವೊಂದು ಹೊಸ ಕೆಳ ವರ್ಗವನ್ನು ಸೃಷ್ಟಿಸುವುದಿಲ್ಲವೆಂಬ ಎಚ್ಚರಿಕೆಯಿಂದಿರುವುದಕ್ಕೂ ಇದು ಅವಕಾಶವಾಗಿದೆ. ವಿಶ್ವದ ಶೇ.20ರಷ್ಟು ಜನರಿಗೆ ಓದು, ಬರಹ ತಿಳಿದಿಲ್ಲದಿರುವಾಗ, ಕೇವಲ ಡಿಜಿಟಲ್ ತಂತ್ರಜ್ಞಾನದ ಪ್ರಸರಣದಿಂದಷ್ಟೇ ಜಾಗತಿಕ ಜ್ಞಾನ ವಿಭಜನೆಯನ್ನು ಕೊನೆಗೊಳಿಸುವುದು ಅಸಾಧ್ಯ. -ಕೌಶಿಕ್ ಬಸು, ವಿಶ್ವಬ್ಯಾಂಕ್‌ನ ಮುಖ್ಯ ಆರ್ಥಿಕತಜ್ಞ ನಾವು ಪ್ರತಿಯೊಬ್ಬರನ್ನು ಸಂಪರ್ಕಿಸುವುದನ್ನು ಮುಂದುವರಿಸಲೇಬೇಕು. ಯಾರನ್ನೂ ಹಿಂದೆ ಬಿಡಬಾರದು. ಏಕೆಂದರೆ ಕಳೆದು ಹೋದ ಅವಕಾಶಗಳ ಬೆಲೆ ಅಗಾಧವಾದುದು.
ಆದರೆ, ಡಿಜಿಟಲ್ ಲಾಭಾಂಶಗಳನ್ನು ಸಮಾಜದ ಎಲ್ಲ ಭಾಗಗಳಿಗೆ ವಿಸ್ತೃತವಾಗಿ ಹಂಚಲ್ಪಡಬೇಕಾದರೆ, ದೇಶಗಳು ತಮ್ಮ ವ್ಯಾಪಾರ, ಹವಾಮಾನಗಳನ್ನು ಸುಧಾರಿಸಬೇಕು, ಜನರ ಶಿಕ್ಷಣ ಹಾಗೂ ಆರೋಗ್ಯಕ್ಕೆ ಬಂಡವಾಳ ಹೂಡಬೇಕು ಹಾಗೂ ಉತ್ತಮ ಆಡಳಿತವನ್ನು ಒದಗಿಸಬೇಕು.
-ಜಿಮ್ ಯೋಂಗ್ ಕಿಮ್, ವಿಶ್ವಬ್ಯಾಂಕ್ ಗುಂಪಿನ ಅಧ್ಯಕ್ಷ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X