Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮಾತುಕತೆಯೊಂದೇ ದಾರಿ

ಮಾತುಕತೆಯೊಂದೇ ದಾರಿ

ವಾರ್ತಾಭಾರತಿವಾರ್ತಾಭಾರತಿ14 Jan 2016 11:59 PM IST
share

ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಇಳಿಯಿತು....ಎಂಬ ಗಾದೆಯಂತಾಗಿದೆ ಪಾಕ್-ಭಾರತ ಮಾತುಕತೆ. ಶರೀಫ್ ಮೊಮ್ಮಗಳ ಮದುವೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಮೋದಿಯ ಮೂಲಕ ಭಾರತ-ಪಾಕ್ ಮಾತುಕತೆಯಲ್ಲಿ ಹೊಸ ಶಕೆ ಹುಟ್ಟಿಕೊಂಡಿತೋ ಎಂದು ವಿಶ್ವ ಭಾವಿಸುವಾಗಲೇ ಪಠಾಣ್‌ಕೋಟ್‌ನಲ್ಲಿ ಉಗ್ರರು ದಾಳಿ ನಡೆಸಿದ್ದಾರೆ.ಸಾಧಾರಣವಾಗಿ ಭಾರತ-ಪಾಕ್‌ನ ನಡುವೆ ಸಂಬಂಧ ಹೊಸದಾಗಿ ಸುಧಾರಿಸುತ್ತದೆ ಎನ್ನುವಾಗ ಪಾಕಿಸ್ತಾನ ಅಥವಾ ಭಾರತದ ಉಗ್ರರು ಅದಕ್ಕೆ ತೊಡಕಾಗುತ್ತಲೇ ಬಂದಿದ್ದಾರೆ.ಕೇಸರಿ ಉಗ್ರರ ಸಂಜೋತಾ ಎಕ್ಸ್‌ಪ್ರೆಸ್ ದಾಳಿ, ಅಥವಾ ಈ ಹಿಂದೆ ಪಾಕಿಸ್ತಾನದ ಉಗ್ರರು ನಡೆಸಿದ ದಾಳಿಗಳು ಉಭಯ ದೇಶಗಳ ನಡುವಿನ ಸೌಹಾರ್ದದ ಮೇಲೆ ನಡೆದ ದಾಳಿಗಳಾಗಿವೆ. ಉಭಯ ದೇಶಗಳ ಉಗ್ರರಿಗೂ ಪಾಕ್-ಭಾರತ ಮಾತುಕತೆ ಬೇಕಾಗಿಲ್ಲ. ಈ ಬಾರಿಯೂ ಅದೇ ಆಗಿದೆ. ಮೋದಿಯ ಭೇಟಿಯ ಒಟ್ಟಿಗೆ ಮಾತುಕತೆಗಳು ಚುರುಕಾಗುತ್ತವೆ ಎಂದಾಕ್ಷಣ ಪಠಾಣ್‌ಕೋಟ್ ದಾಳಿ ನಡೆದಿದೆ. ಇದೀಗ ಈ ಉಗ್ರರ ಆಸೆಯನ್ನು ಈಡೇರಿಸಲು ಉಭಯ ದೇಶಗಳೂ ಪೈಪೋಟಿಯಲ್ಲಿರುವಂತಿದೆ. ಅದರ ಭಾಗವಾಗಿಯೇ ಭಾರತ-ಪಾಕ್ ಕಾರ್ಯದರ್ಶಿ ಮಟ್ಟದ ಮಾತುಕತೆ ಮುಂದೂಡಿಕೆಯಾಗಿದೆ.

ಮಾತುಕತೆಯ ಸಂದರ್ಭದಲ್ಲಿ ಇದನ್ನು ವಿಫಲಗೊಳಿಸುವುದಕ್ಕೆ ಕೆಲವು ದುಷ್ಕರ್ಮಿಗಳು ಹೊಂಚು ಹಾಕುತ್ತಿರುವುದು ಉಭಯ ದೇಶಗಳ ಸರಕಾರದ ಗಮನದಲ್ಲಿರುವುದು ಅತ್ಯಗತ್ಯ.ಉಭಯ ದೇಶಗಳ ನಡುವೆ ಮಾತುಕತೆಗೆ ಹೊರತಾದ ಇನ್ನೊಂದು ದಾರಿ ಇಲ್ಲ.ಇದ್ದರೆ ಅದು ಯುದ್ಧ ಮಾತ್ರ.ಯುದ್ಧ ನಡೆಯುವುದರಿಂದ ಉಭಯ ದೇಶಗಳು ಸರ್ವನಾಶವಾಗುವುದು ಮಾತ್ರವಲ್ಲ, ಏಶ್ಯಾ ಉಪಖಂಡದ ಮೇಲೆ ಅದು ಮಾರಕ ಪರಿಣಾಮವನ್ನು ಬೀರುತ್ತದೆ. ಅಭಿವೃದ್ಧಿಯ ಹಾದಿಯಲ್ಲಿರುವ ಉಭಯದೇಶಗಳು ಈ ದಿನಗಳಲ್ಲಿ ಯುದ್ಧವನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿಲ್ಲ.ಕೊನೆಯವರೆಗೂ ನಾವು ಮಾತುಕತೆಯನ್ನು ಮುಂದುವರಿಸುತ್ತಲೇ ಇರಬೇಕು.ಯಾಕೆಂದರೆ, ಮಾತುಕತೆ ಭಿನ್ನಾಭಿಪ್ರಾಯಗಳನ್ನು ಪರಿಹರಿಸದೇ ಇರಬಹುದು, ಆದರೆ ಯುದ್ಧವಾಗುವುದನ್ನು ತಡೆಯುವುದಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆ.ಉಗ್ರರ ಮೇಲೆ ಸೇಡು ತೀರಿಸಿಕೊಳ್ಳಲು ಉಭಯ ಸರಕಾರಕ್ಕಿರುವ ಒಂದೇ ಮಾರ್ಗವೆಂದರೆ ಅವರ ಉದ್ದೇಶವನ್ನು ವಿಫಲಗೊಳಿಸುವುದು.ಅಂದರೆ ಯಾವ ತಡೆಯೂ ಇಲ್ಲದೆ ಮಾತುಕತೆಯನ್ನು ಮುಂದುವರಿಸುತ್ತಾ ಹೋಗುವುದು.ಅದು ಉಗ್ರರಿಗೆ ಮಾಡುವ ಅತಿ ದೊಡ್ಡ ಮುಖ ಭಂಗವಾಗಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಉಗ್ರರ ಆಲೋಚನೆಗಳೇ ಮೇಲುಗೈಯಾಗುವ ಲಕ್ಷಣಗಳು ಕಾಣುತ್ತಿವೆ.

ಈ ಬಾರಿ ಪಠಾಣ್‌ಕೋಟ್ ದಾಳಿಯನ್ನು ಪಾಕಿಸ್ತಾನವೂ ಗಂಭೀರವಾಗಿ ತೆಗೆದುಕೊಂಡಿದೆ. ಅದು ಪ್ರತ್ಯೇಕವಾಗಿ ತನಿಖೆಯನ್ನು ಆರಂಭಿಸಿದೆ. ಮಾತ್ರವಲ್ಲ, ಭಾರತದ ಬೇಡಿಕೆಗಳಿಗೆ ಸ್ಪಂದಿಸಿದೆ. ಇದೇ ಸಂದರ್ಭದಲ್ಲಿ ಭಾರತ ಸರಕಾರಕ್ಕೆ ಉಗ್ರರ ದಾಳಿ, ವೈಯಕ್ತಿಕ ಮುಖಭಂಗವಾಗಿದೆ. ವಿರೋಧಪಕ್ಷಕ್ಕೆ ಮಾತ್ರವಲ್ಲ, ತನ್ನದೇ ಪಕ್ಷದ ಅಥವಾ ಸಂಘಪರಿವಾರದ ನಾಯಕರಿಗೆ ಅದು ಉತ್ತರಿಸಬೇಕಾಗಿದೆ. ಪಾಕಿಸ್ತಾನದೊಂದಿಗೆ ಮಾತುಕತೆ ಮುಂದುವರಿಸಿದ್ದೇ ಆದರೆ ವಿರೋಧ ಪಕ್ಷದ ಟೀಕೆ, ವ್ಯಂಗ್ಯಗಳನ್ನು ಎದುರಿಸಬೇಕಾಗುತ್ತದೆ. ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ಈ ಹಿಂದೆ ಬಿಜೆಪಿಯೂ ಸಾಕಷ್ಟು ರಾಜಕೀಯ ಲಾಭಗಳನ್ನು ಗಳಿಸಿಕೊಂಡಿರುವುದರಿಂದ, ವಿರೋಧ ಪಕ್ಷಗಳು ಈಗ ಅದನ್ನೇ ಮುಂದಿಟ್ಟುಕೊಂಡು ಬಿಜೆಪಿಯನ್ನು ಟೀಕಿಸುತ್ತಿವೆ. ಇತ್ತ ಸಂಘಪರಿವಾರಕ್ಕೂ ಇಕ್ಕಟ್ಟಿನ ಪರಿಸ್ಥಿತಿ.ಉಗ್ರರು ದಾಳಿ ಮಾಡಿದಾಗ ಬಿಜೆಪಿ ಏನೂ ಪ್ರತಿಕ್ರಿಯಿಸಲಿಲ್ಲ ಎಂದು ಜನರು ಆಡಿಕೊಳ್ಳುವುದು ಅದಕ್ಕೆ ಬೇಕಾಗಿಲ್ಲ.ಈ ನಿಟ್ಟಿನಲ್ಲಿ ಪಾಕಿಸ್ತಾನದಿಂದ ಸರಕಾರ ತಕ್ಷಣ ಪ್ರತಿಕ್ರಿಯೆಯನ್ನು ಬಯಸಿದೆ. ಅಂದರೆ, ತಕ್ಷಣ ಕೆಲವರನ್ನಾದರೂ ಬಂಧಿಸಿ ಜೈಲಿಗೆ ತಳ್ಳಿ, ಭಾರತ ಸರಕಾರವನ್ನು ಮುಖ್ಯವಾಗಿ ಸಂಘಪರಿವಾರವನ್ನು ಸಮಾಧಾನಿಸಬೇಕು.ಆದರೆ ಒಂದನ್ನು ನಾವು ಗಮನಿಸಬೇಕು.ಭಾರತದಲ್ಲಿ ನಡೆದಿರುವ ಎಷ್ಟೋ ಭಯೋತ್ಪಾದನಾ ದಾಳಿಗಳಲ್ಲಿ ನಿಜವಾದ ಅಪರಾಧಿಗಳನ್ನು ಬಂಧಿಸಲು ನಮ್ಮ ಸರಕಾರಕ್ಕೆ ಸಾಧ್ಯವಾಗಿಲ್ಲ.ಸಂಜೋತಾ ಎಕ್ಸ್‌ಪ್ರೆಸ್‌ನಂತಹ ದಾಳಿ ಭಾರತದೊಳಗೆ ನಡೆದಿದ್ದರೂ ಸರಕಾರ ಅಮಾಯಕರನ್ನು ಬಂಧಿಸಿ ಜೈಲಿಗೆ ತಳ್ಳಿತ್ತು.ಹಲವು ವರ್ಷಗಳ ನಂತರ ನಿಜವಾದ ಆರೋಪಿಗಳು ಯಾರು ಎನ್ನುವುದು ಬಹಿರಂಗವಾಗಿಯಿತು. ಮಾಲೆಗಾಂವ್, ಮಕ್ಕಾ ಮಸೀದಿ, ಅಜ್ಮೀರ್ ಸ್ಫೋಟಗಳಲ್ಲೂ ನಿಜವಾದ ಆರೋಪಿಗಳನ್ನು ಬಂಧಿಸಲು ಎಷ್ಟು ವರ್ಷಗಳು ಬೇಕಾಯಿತು ಎನ್ನುವುದನ್ನು ನಾವು ನೋಡಿದ್ದೇವೆ.ಹೀಗಿರುವಾಗ ಭಾರತದಲ್ಲಿ ನಡೆದ ದಾಳಿಗೆ ಸಂಬಂಧಿಸಿ, ಯಾವುದೇ ಗಂಭೀರ ತನಿಖೆ, ವಿಚಾರಣೆ ನಡೆಯುವ ಮೊದಲೇ, ಇಂತಿಷ್ಟು ಉಗ್ರರನ್ನು ಪಾಕಿಸ್ತಾನ ಬಂಧಿಸಬೇಕು ಎಂದು ಭಾರತ ನಿರೀಕ್ಷಿಸುವುದು ಅತಿಯಾಗುತ್ತದೆ.ಅದಲ್ಲದೆ, ಪಾಕಿಸ್ತಾನದಲ್ಲಿ ಪ್ರಜಾಸತ್ತೆ ಬಲವಾಗಿಲ್ಲ.ಸರಕಾರದ ಹಿಡಿತ ಸೇನೆಯ ಕೈಯಲ್ಲಿದೆ. ಹಲವು ನಿರ್ಧಾರಗಳನ್ನು ಒಮ್ಮಿಂದೊಮ್ಮೆಲೆ ತೆಗೆದುಕೊಳ್ಳುವುದು ಪಾಕಿಸ್ತಾನದೊಳಗೆ ಮಿಲಿಟರಿ ಬಂಡಾಯಕ್ಕೂ ಕಾರಣವಾಗಬಹುದು.ಈ ಹಿನ್ನೆಲೆಯಲ್ಲಿ ತನಿಖೆ, ವಿಚಾರಣೆಗಳಿಗೆ ಕಾಲಾವಕಾಶ ನೀಡಿ, ಮಾತುಕತೆಯನ್ನು ಮುಂದುವರಿಸುವುದು ಉಭಯ ದೇಶಗಳಿಗೂ ಒಳಿತನ್ನೇ ಮಾಡುತ್ತದೆ.

ಇನ್ನೊಂದು ಅಂಶವನ್ನೂ ನಾವಿಲ್ಲಿ ಗಮನಿಸಬೇಕಾಗಿದೆ. ಈ ದಾಳಿಯಲ್ಲಿ ಉಗ್ರರಿಗೆ ಸಹಕರಿಸಿದ್ದಾನೆ ಎಂದು ನಮ್ಮದೇ ಹಿರಿಯ ಯೋಧನೊಬ್ಬನನ್ನು ಸಂಶಯಿಸಲಾಗಿದೆ ಮತ್ತು ವಿಚಾರಣೆ ನಡೆಯುತ್ತಿದೆ. ಇತ್ತೀಚೆಗಷ್ಟೇ, ಭಾರತ ಯೋಧನೊಬ್ಬ ಐಎಸ್‌ಐಗೆ ಮಾಹಿತಿ ನೀಡಿದ ಆರೋಪದಲ್ಲಿ ಬಂಧಿತನಾಗಿದ್ದ.ಅಂದರೆ ಈ ದಾಳಿಯಲ್ಲಿ ಇವರೆಲ್ಲರೂ ಪರೋಕ್ಷವಾಗಿ ಪಾಲುದಾರರಾಗಿದ್ದರೇ?ಎನ್ನುವುದು ವಿಚಾರಣೆಯ ಭಾಗವೇ ಆಗಿದೆ. ಉಭಯ ದೇಶಗಳಲ್ಲಿನ ದುಷ್ಕರ್ಮಿಗಳು ಈ ದಾಳಿಯಲ್ಲಿ ಎಷ್ಟರಮಟ್ಟಿಗೆ ಪಾತ್ರವಹಿಸಿದ್ದಾರೆ ಎನ್ನುವ ತನಿಖೆಯೂ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ವಿಚಾರಣೆಗಾಗಿ ಪಾಕಿಸ್ತಾನದ ತನಿಖಾಧಿಕಾರಿಗಳು ಭಾರತಕ್ಕೆ ಆಗಮಿಸಲು ಅನುಮತಿ ಕೇಳಿದ್ದಾರೆ.ಅನುಮತಿ ನೀಡಲು ಭಾರತವೂ ಮುಂದಾಗಿರುವುದು ಶ್ಲಾಘನೀಯವಾಗಿದೆ. ಅಂತೆಯೇ ಮಾತುಕತೆಯ ಸಾಧ್ಯತೆಗಳು ಸಂಪೂರ್ಣ ಇಲ್ಲವಾಗದಂತೆ ನೋಡಿಕೊಳ್ಳುವುದೂ ಉಭಯ ದೇಶಗಳ ನಾಯಕರ ಕರ್ತವ್ಯ.ಇದು ಉಭಯ ದೇಶಗಳ ಜನರ ಬದುಕಿಗೆ ಸಂಬಂಧಿಸಿದ್ದಾಗಿರುವುದರಿಂದ, ಸಹನೆ, ತಾಳ್ಮೆ, ವಿವೇಕ, ಮುತ್ಸದ್ದಿತನದಿಂದ ಒಂದೊಂದು ಹೆಜ್ಜೆಯನ್ನೂ ಮುಂದಿಡಬೇಕು.ಯಾವ ಕಾರಣಕ್ಕೂ ಉಭಯ ದೇಶಗಳ ರಾಜಕೀಯ ದಾಳಗಳಿಗೆ ಮಾತುಕತೆ ಬಲಿಪಶುವಾಗಬಾರದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X