ಇಂದಿನಿಂದ ಆಟೊ ರಿಕ್ಷಾಗಳ ಪರಿಷ್ಕೃತ ದರ ಜಾರಿಗೆ
ಮಂಗಳೂರು, ಜ.14: ದ.ಕ. ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಜಿಲ್ಲೆಯಲ್ಲಿ ಸಂಚರಿಸುವ ಆಟೊ ರಿಕ್ಷಾಗಳ ದರಗಳನ್ನು ಪರಿಷ್ಕರಿಸಿ ಜ.15ರಿಂದ ಜಾರಿಗೆ ಬರುವಂತೆ ಆದೇಶ ನೀಡಿದೆ.
ಕನಿಷ್ಠ ದರ ಮೊದಲ 1.5 ಕಿ.ಮೀ.ಗೆ 25 ರೂ. (ಗರಿಷ್ಠ ಮೂವರು ಪ್ರಯಾಣಿಕರಿಗೆ). ನಂತರದ ಪ್ರತಿ ಕಿ.ಮೀ. ದರ 13 ರೂ. (ಗರಿಷ್ಠ ಮೂವರು ಪ್ರಯಾಣಿಕರಿಗೆ). ಕಾಯುವ ದರಗಳು: ಮೊದಲ 15 ನಿಮಿಷಗಳವರೆಗೆ ಉಚಿತವಾಗಿದ್ದು, ನಂತರ 45 ನಿಮಿಷಗಳವರೆಗೆ ಪ್ರಯಾಣ ದರದ ಶೇ.25. ಲಗೇಜು ದರ ಮೊದಲ 20 ಕೆ.ಜಿ. ಉಚಿತವಾಗಿದ್ದು, ನಂತರದ ಪ್ರತಿ 20 ಕೆ.ಜಿ.ಗೆ 2 ರೂ. ಹೆಚ್ಚುವರಿ ಪಾವತಿಸಬೇಕಾಗುತ್ತದೆ.
ರಾತ್ರಿ ವೇಳೆ: ರಾತ್ರಿ 10ರ ಬಳಿಕ ಬೆಳಗ್ಗೆ 5ರ ಮೊದಲು ಮಾತ್ರ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶವಿದೆ ಎಂದು ಪ್ರಕಟನೆ ತಿಳಿಸಿದೆ.
Next Story





