‘ಕದ್ರಿ ಉದ್ಯಾನವನದಲ್ಲಿ ಜೂನ್‌ನೊಳಗೆ ಸಂಗೀತ ಕಾರಂಜಿ’
ಮಂಗಳೂರು, ಜ.14: ನಗರದ ಕದ್ರಿ ಉದ್ಯಾನವನ ಪಕ್ಕದ ಹಳೆ ಜಿಂಕೆ ಪಾರ್ಕ್‌ನಲ್ಲಿ 5 ಕೋ.ರೂ. ವೆಚ್ಚದಲ್ಲಿ ಸಂಗೀತ ಕಾರಂಜಿ ಜೂನ್‌ನೊಳಗೆ ನಿರ್ಮಾಣಗೊಂಡು ಸಾರ್ವ ಜನಿಕರಿಗೆ ಮನರಂಜನೆ ನೀಡಲಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ. ಕದ್ರಿ ಉದ್ಯಾನವನದ ಎದುರಿನ ಜಿಂಕೆ ಪಾರ್ಕ್‌ನಲ್ಲಿ ಸಂಗೀತ ಕಾರಂಜಿಯ ಕಾಮಗಾರಿಗೆ ಇಂದು ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ಮನರಂಜನೆಗಾಗಿ ಈ ಸಂಗೀತ ಕಾರಂಜಿ ನಿರ್ಮಿಸಲಾಗುತ್ತಿದ್ದು, ಹಳೆ ಜಿಂಕೆ ಪಾರ್ಕ್‌ನಲ್ಲಿ ಪ್ರಸ್ತುತ ಇರುವ ಶೇ. 90ರಷ್ಟು ಮರಗಳನ್ನು ಉಳಿಸಿಕೊಂಡು ಈ ಸಂಗೀತ ಕಾರಂಜಿ ನಿರ್ಮಾ ಣವಾಗಲಿದೆ. ವೆಂಕಟೇಶ್ ಪೈ ಸಂಗೀತ ಕಾರಂಜಿಯ ವಿನ್ಯಾಸ ಗಾರರಾಗಿದ್ದು, ಲ್ಯಾಂಡ್ ಸ್ಕೇಪ್, ಬಯಲು ರಂಗಮಂದಿರ, ಲೇಸರ್, ಶಾಪಿಂಗ್ ಕಿಯಾಸ್ಕ್‌ನೊಂದಿಗೆ ಈ ಸಂಗೀತ ಕಾರಂಜಿ ನಿರ್ಮಾಣವಾಗಲಿದ್ದು, ಜೊತೆಗೆ ಪಾರ್ಕ್‌ನಲ್ಲಿ ಇತರ ಅಭಿ ವೃದ್ಧಿ ಕಾಮಗಾರಿಗಳೂ ನಡೆಯಲಿವೆ ಎಂದವರು ತಿಳಿಸಿದರು. 6 ತಿಂಗಳ ಹಿಂದೆ ಸಂಗೀತ ಕಾರಂಜಿ ನಿರ್ಮಿಸುವ ಕುರಿತು ಯೋಜನೆ ಹಮ್ಮಿಕೊಳ್ಳಲಾಗಿತ್ತಾದರೂ, ವಿನ್ಯಾಸ, ನಕ್ಷೆ ಹಾಗೂ ಇತರ ಕಾರ್ಯಗಳ ತಯಾರಿಯ ಬಳಿಕ ಇಂದು ಶಿಲಾನ್ಯಾಸ ನಡೆಸಲಾಗಿದೆ. ಮುಡಾ ಆಯುಕ್ತ ಮುಹಮ್ಮದ್ ನಝೀರ್, ಕಾಂಗ್ರೆಸ್ ನಾಯಕ ಟಿ.ಕೆ.ಸುಧೀರ್, ಗುತ್ತಿಗೆದಾರ ಪ್ರಭಾಕರ ಯೆಯ್ಯಿಡಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.





