ಮುಕ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ

ಮುಕ್ಕ ರಾಷ್ಟ್ರೀಯ ಹೆದ್ದಾರಿಯ ಶ್ರೀನಿವಾಸ ಅಸ್ಪತ್ರೆ ಬಳಿ ಇಂದು ಬೆಳಗ್ಗೆ ಸರಣಿ ಅಪಘಾತ ನಡೆದಿದೆ.
ರಸ್ತೆ ಬದಿ ನಿಲ್ಲಿಸಿದ್ದ ಕಾರು, ರಿಕ್ಷಾ , ಆಕ್ಟಿವಾ, ಸೈಕಲ್ ಗೆ ಇನ್ನೋವ ಕಾರು ಢಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ನಡೆದಿದೆ.
ಕೆರಳದ ಕೊಲ್ಲಂ ನಿಂದ ಕೊಲ್ಲೂರು ಮೂಕಾಂಬಿಕಾ ಕ್ಕೆ ತೆರಳುತ್ತಿದ್ದ ಇನ್ನೋವ ಕಾರು ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದ್ದು, ಘಟನೆಯಿಂದ ಚಾಲಕ ಸಜೀವ್ ಎಂಬವರು ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲ್ಲಂ ನ ಜಿ.ಐ. ಗಂಗೇನಾಥ ಸ್ವಾಮಿ ಮತ್ತು ಸಂಘಡಿಗರು ಕಾರಿನಲ್ಲಿ ತೆರಳುತ್ತಿದ್ದರು.
ಕಾರಿನಲ್ಲಿದ್ದ ಸ್ವಾಮೀಜಿ, ಗಿರೀಶ್, ದಿಲೀಪ್, ಚಾಲಕ ಸಜಿವ್ ಗಾಯಗೊಂಡಿದ್ದಾರೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Next Story





