ಪಾಕ್ ಸಿಟಿಡಿ ವಶದಲ್ಲಿ ಜೈಷ್ ಮುಖ್ಯಸ್ಥ ಮಸೂದ್ ಅಝರ್

ಕರಾಚಿ, ಜ15 : ಪಠಾಣ್‌ಕೋಟ್ ವಾಯುನಲೆ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಜೈಷ್ -ಎ-ಮುಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಝರ್‌ನನ್ನು ಭಯೋತ್ಪಾದನಾ ನಿಗ್ರಹ ವಿಭಾಗ(ಸಿಟಿಡಿ) ರಕ್ಷಣಾತ್ಮಕ ವಶಕ್ಕೆ ತೆಗೆದುಕೊಂಡಿರುವುದನ್ನು ಪಾಕ್ ದೃಢಪಡಿಸಿದೆ.
ಮಸೂದ್ ಅಝರ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗುತ್ತಿದೆ. ಒಂದು ವೇಳೆ ಆತ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಆತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ರಾಣಾ ಸನಾವುಲ್ಲಾ ತಿಳಿಸಿದ್ದಾರೆ.
ನಾಯಕ ಮೌಲಾನ ಮಸೂದ್ ಅಝರ್‌ರನ್ನು ಪಾಕಿಸ್ತಾನ ಬಂಧಿಸಿರುವ ವಿಚಾರ ಗೊತ್ತಿಲ್ಲ. ಅಂತಹ ಬಂಧನದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಖಲೀಲುಲ್ಲಾ ಖಾಝಿ ಗುರುವಾರ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿತ್ತು.
Next Story





