3 ವರ್ಷಗಳ ಹಿಂದೆ ಅಫ್ಘಾನಿಸ್ತಾನಕ್ಕೆ ತೆರಳಿದ್ದ ಹಾಮಿದ್ ಪಾಕ್‌ನಲ್ಲಿ ಪತ್ತೆ

ಮುಂಬೈ, ಜ.15: ಮೂರು ವರ್ಷಗಳ ಹಿಂದೆ ಉತ್ತಮ ಉದ್ಯೋಗ ಅರಸಿ ಮುಂಬೈನಿಂದ ಅಫ್ಘಾನಿಸ್ತಾನಕ್ಕೆ ತೆರಳಿದ್ದ ಹಾಮಿದ್ ಅನ್ಸಾರಿ ಇದೀಗ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದಾರೆ.
ಎಂಬಿಎ ಪಡೆದಿದ್ದ ಹಾಮಿದ್ ಅನ್ಸಾರಿ 2012 ನವೆಂಬರ್‌ನಲ್ಲಿ ಅಫ್ಘಾನಿಸ್ತಾನಕ್ಕೆ ತೆರಳಿದ್ದರು. ಆದರೆ ಬಳಿಕ ಅಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಅಫ್ಘನ್‌ಗೆ ತೆರಳುವ ಮೊದಲು ಅವರು ಮುಂಬೈನ ಕಾಲೇಜೊಂದರಲ್ಲಿ ಉದ್ಯೋಗಿಯಾಗಿದ್ದರು.
ಕಾಣೆಯಾದ ಅನ್ಸಾರಿ ಪತ್ತೆಗೆ ಆತನ ಸಂಬಂಧಿಕರು ಅಫ್ಘಾನಿಸ್ತಾನ ಸರಕಾರದ ಮೊರೆ ಹೋಗಿದ್ದರು. ಆದರೆ ಅಲ್ಲಿಯೂ ಕಾಣೆಯಾಗಿದ್ದ ಅಸ್ಸಾರಿ ಇದೀಗ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದಾರೆ.
Next Story





