ಕಾವೇರಿ ಜಂಕ್ಸನ್‌ನಲ್ಲಿ ನಿಗೂಢ ಬಾಕ್ಸ್ ಪತ್ತೆ; ಬೆಂಗಳೂರು ಹೈ ಆಲರ್ಟ್ ಘೋಷಣೆ !
ಬೆಂಗಳೂರು, ಜ.15: ನಗರದ ಕಾವೇರಿ ಜಂಕ್ಷನ್ ಬಳಿ ಟಿಫಿನ್ ಬಾಕ್ಸ್‌ನೊಳಗೆ ಬಾಂಬ್ ಇರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮತ್ತು ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ತಪಾಸಣೆ ನಡಸಿದಾಗ ಬಾಕ್ಸ್‌ನೊಳಗೆ ಸ್ಫೋಟಕದ ಬದಲು ಲಿಕ್ವಿಡ್ ಇರುವುದು ಗೊತ್ತಾಯಿತು.
ಟೇಪ್ ಸುತ್ತಿಟ್ಟಿದ್ದ ಬಾಕ್ಸ್ ಪತ್ತೆಯಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಕ್ಸ್‌ನ ಮೇಲೆ ಚೈನೀಸ್ ಭಾಷೆಯಲ್ಲಿ ಬರಹ ಪತ್ತೆಯಾಗಿತ್ತು. ವೈಯಾಲ್‌ಕಾವಲ್ ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಬಾಕ್ಸ್‌ನಲ್ಲಿ ಲಿಕ್ವಿಡ್ ಇರುವುದು ಸ್ಫೋಟಕವಲ್ಲ ಮದ್ಯ ಎನ್ನುವುದು ಗೊತ್ತಾಯಿತು.
ಈ ಪ್ರಕರಣ ನಡೆದ ಬೆನ್ನಲ್ಲೆ ಬೆಂಗಳೂರು ನಗರಾದ್ಯಂತ ಹೈಅಲರ್ಟ್ ಘೋಷಿಸಲಾಗಿದ್ದು, ಯಾವುದೇ ನಿಗೂಢ ವಸ್ತು ಪತ್ತೆಯಾದರೂ ಪೊಲೀಸರಿಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಎನ್‌ಎಸ್ ಮೇಘರಿಕ್ ತಿಳಿಸಿದ್ದಾರೆ.
Next Story





