ವಿಷಪ್ರಾಶನದಿಂದ ಸುನಂದಾ ಪುಷ್ಕರ್ ಸಾವು: ಏಮ್ಸ್ ವರದಿ

ಹೊಸದಿಲ್ಲಿ, ಜ.15: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದ ಪುಷ್ಕರ್ ಸಾವಿಗೆ ವಿಶಪ್ರಾಶನ ಕಾರಣ ಎನ್ನುವುದು ಏಮ್ಸ್ ವೈದಕೀಯ ಮಂಡಳಿಯ ವರದಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಇಂದು ವಿವರ ನೀಡಿದ ದಿಲ್ಲಿ ಪೊಲೀಸ್ ಆಯುಕ್ತ ಬಿಎಸ್ ಬಸ್ಸಿ ಅವರು ರೇಡಿಯೋ ತರಂಗಗಳಿಂದ ಸುನಂದ ಪುಷ್ಕರ್ ಸಾವು ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ವೈದ್ಯರ ವರದಿ ಆಧರಿಸಿ ತನಿಖೆ ಚರುಕುಗೊಳಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಬಸ್ಸಿ ತಿಳಿಸಿದ್ದಾರೆ.
ಈ ಕಾರಣದಿಂದಾಗಿ ಮತ್ತೆ ತರೂರ್ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Next Story





