ಸಾನಿಯಾ-ಹಿಂಗಿಸ್ ಮುಡಿಗೆ ಸಿಡ್ನಿ ಕಿರೀಟ 30ನೆ ಜಯ ಗಳಿಸಿದ ಭಾರತ-ಸ್ವಿಸ್ ಡಬಲ್ಸ್ ಜೋಡಿ

ಹೊಸದಿಲ್ಲಿ, ಜ.15: ಭಾರತದ ಸಾನಿಯಾ ಮಿರ್ಝಾ ಮತ್ತು ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಸಿಡ್ನಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಇಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಫೈನಲ್‌ನಲ್ಲಿ ಸಾನಿಯಾ ಮತ್ತು ಹಿಂಗಿಸ್ ಅವರು ಕ್ಯಾರಲೈನ್ ಗಾರ್ಸಿಯಾ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಕ್ ಅವರನ್ನು 1-6,7-5, 10-5 ಅಂತರದಿಂದ ಗೆಲ್ಲುವ ಮೂಲಕ 2016ರಲ್ಲಿ 2ನೆ ಪ್ರಶಸ್ತಿ ಬಾಚಿಕೊಂಡರು.
ಸಾನಿಯಾ ಮತ್ತು ಹಿಂಗಿಸ್ ಸತತ 30ನೆ ಗೆಲುವಿನೊಂದಿಗೆ ವಿಶ್ವದಾಖಲೆಯನ್ನು ಉತ್ತಮಪಡಿಸಿಕೊಂಡಿದ್ಧಾರೆ.
Next Story





