ಹಿಂದೂ ಧರ್ಮ ಉಳಿದಿರುವುದು ಮಣ್ಣಿನ ಗುಣದಿಂದ ಹೊರತು ರಾಜಕರಣಿಗಳಿಂದಲ್ಲ

ಮೂಡುಬಿದಿರೆ: ಭಾರತದಲ್ಲಿ ಅನೇಕ ಜಾತಿ ಧರ್ಮಗಳಿವೆ. . ಹಿಂದೂ ಧರ್ಮವನ್ನು ಅವಹೇಳನ ಮಾಡುವವರನ್ನು ನಮ್ಮ ರಾಜ್ಯದಲ್ಲಿ ಬುದ್ದಿಜೀವಿಗಳು ಎಂದು ಕರೆಯಲಾಗುತ್ತಿದೆ. ಸಾವಿರಾರು ವರ್ಷದ ಇತಿಹಾಸವಿರುವ ಹಿಂದೂ ಧರ್ಮ ಉಳಿದಿದ್ದರೆ ಅದು ಈ ದೇಶದ ಮಣ್ಣಿನ ಗುಣದಿಂದ ಹೊರತು ರಾಜಕಾರಣಿಗಳಿಂದ ಅಲ್ಲ ಎಂದು ವಕೀಲ ಕೆ.ಆರ್ ಪಂಡಿತ್ ಹೇಳಿದರು. ಅವರು ರಾಜ್ಯ ಸರ್ಕಾರದ ಪ್ರಸ್ತಾವಿತ 'ಅಂಧಶ್ರದ್ಧಾ ನಿರ್ಮೂಲನ ಕಾನೂನು' ವಿರೋಧಿಸಿ ರಾಷ್ಟ್ರೀಯ ಹಿಂದೂ ಅಂದೋಲನ ಮೂಡುಬಿದಿರೆ ಶಾಖೆಯು ಇಲ್ಲಿನ ಬಸ್‌ನಿಲ್ದಾಣದಲ್ಲಿ ಶುಕ್ರವಾರ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಧಾರ್ಮಿಕ ಆಚರಣೆಗಳು ಅವರವರ ನಂಬಿಕೆಗೆ ಬಿಟ್ಟ ವಿಚಾರ ಅದನ್ನು ಮೌಢ್ಯ ಎಂದು ಪರಿಗಣಿಸಿ ನಿಷೇಧಿಸಲು ಕಾನೂನು ರೂಪಿಸುವುದು ಧರ್ಮವಿರೋಧಿ ನಡೆಯಾಗಿದೆ. ಔರಂಗಜೇಬ್, ಮೊಗಲರ ಕಾಲದಲ್ಲು ಹಿಂದೂ ಧರ್ಮದ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದವು. ಸರಕಾರ ಅಂಧಶ್ರದ್ಧಾ ನಿರ್ಮೂಲನ ಕಾನೂನು ಜಾರಿಗೆ ತರುವ ಮೊದಲು ಇನ್ನೊಮ್ಮೆ ಕಾನೂನು ತಜ್ಞರೊಂದಿಗೆ ಚರ್ಚಿಸಬೇಕು ಎಂದು ಅವರು ಅಗ್ರಹಿಸಿದರು.
ಮೂಡುಬಿದಿರೆ ಶ್ರೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಟ್ರಸ್ಟಿಗಳಾದ ಶಿವಾನಂದ ಪ್ರಭು, ಶಾಂತರಾಮ ಕುಡ್ವ, ಸನಾತನ ಸಂಸ್ಥೆಯ ಗೋಪಾಲಕೃಷ್ಣ ಮಲ್ಯ, ಡಾ.ಗೌರಿ, ಅಮರ್ ಕೋಟೆ ಮತ್ತಿತರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





