ಮುಸ್ಲಿಮರಿಗೆ ಅಮೆರಿಕ ಪ್ರವೇಶ ನಿಷೇಧ: ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ; ಟ್ರಂಪ್

ವಾಶಿಂಗ್ಟನ್, ಜ. 15: ಮುಸ್ಲಿಮರ ಅಮೆರಿಕ ಪ್ರವೇಶವನ್ನು ನಿರ್ಬಂಧಿಸಬೇಕು ಎಂಬ ತನ್ನ ಹೇಳಿಕೆಯಿಂದ ಹಿಂದೆ ಸರಿಯಲು ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಗುರುವಾರ ನಿರಾಕರಿಸಿದ್ದಾರೆ.
ದೇಶದ ಭದ್ರತೆ ತನ್ನ ಆದ್ಯತೆಯಾಗಿರುವುದ ರಿಂದ ತನ್ನ ನಿರ್ಧಾರವನ್ನು ಮರುಪರಿಶೀಲಿಸುವು ದಿಲ್ಲ ಎಂದು ಟ್ರಂಪ್ ಹೇಳಿದರು.
ಅವರ ಈ ವಿವಾದಾತ್ಮಕ ಹೇಳಿಕೆಗೆ ಅವರದೇಪಕ್ಷದ ಇತರ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿಗಳೇ ವಿರೋಧ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾ ಗಿದೆ. ಅಮೆರಿಕದ ಮಿತ್ರ ದೇಶಗಳಾಗಿರುವ ಭಾರತ ಮತ್ತು ಇಂಡೋನೇಶ್ಯಗಳಂಥ ದೇಶಗಳ ಮುಸ್ಲಿಮ ರನ್ನೂ ನಿಷೇಧಿಸಬೇಕು ಎಂಬ ಇಂಗಿತವನ್ನು ಅವರುಹೊಂದಿದ್ದಾರೆಯೇ ಎಂಬುದಾಗಿ ಅವರದೇ ಪಕ್ಷದ ಇನ್ನೋರ್ವ ಅಭ್ಯರ್ಥಿ ಆಕಾಂಕ್ಷಿ ಜೇಬ್ ಬುಶ್ ಪ್ರಶ್ನಿಸಿರುವುದನ್ನು ಸ್ಮರಿಸಬಹುದಾಗಿದೆ.
‘‘ನಾನು ಈ ದೇಶಕ್ಕೆ ಭದ್ರತೆಯನ್ನು ಬಯಸು ತ್ತೇನೆ. ನಾವು ಅಗಾಧ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಇದು ಇಲ್ಲಿಯ ಸಮಸ್ಯೆ ಮಾತ್ರವಲ್ಲ, ಜಾಗತಿಕ ಸಮಸ್ಯೆಯಾಗಿದೆ’’ ಎಂದರು.
‘‘ನಾವು ಭಾರತ, ಇಂಡೋನೇಶ್ಯ ಮತ್ತು ನಮ್ಮ ಪ್ರಬಲ ಮಿತ್ರ ದೇಶಗಳಿಂದ ಬರುವ ಮುಸ್ಲಿಮ ರನ್ನು ನಿಷೇಧಿಸುತ್ತೇವೆಯೇ? ಖಂಡಿತವಾಗಿಯೂ ಇಲ್ಲ. ನಮಗೆ ಆ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಬೇಕಾಗಿದೆ. ನಾವು ಈಗ ಮಾಡಬೇಕಾಗಿ ರುವುದು ಐಸಿಸ್‌ನ ನಿರ್ಮೂಲ’’ ಎಂದು ಜೇಬ್ ಬುಶ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.





