ಒಬಾಮ ‘ಉಗ್ರ’ ಹೇಳಿಕೆಗೆ ಪಾಕ್ ತಿರುಗೇಟು
ಇಸ್ಲಾಮಾಬಾದ್, ಜ. 15: ಪಾಕಿಸ್ತಾನ ಭಯೋತ್ಪಾದಕರ ಸುರಕ್ಷಿತ ಆಶ್ರಯತಾಣವಾಗಿದೆ ಹಾಗೂ ಮುಂದಿನ ಹಲವು ದಶಕಗಳ ಕಾಲ ಅಲ್ಲಿ ಅಸ್ಥಿರತೆ ನೆಲೆಸುತ್ತದೆ ಎಂಬ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ಹೇಳಿಕೆಗೆ ಪಾಕಿಸ್ತಾನ ಶುಕ್ರವಾರ ತೀವ್ರವಾಗಿ ಪ್ರತಿಕ್ರಿಯಿಸಿದೆ.
ಚೀನಾದ ವಿದ್ವಾಂಸರು, ರಾಜತಾಂತ್ರಿಕರು ಮತ್ತು ಮಾಧ್ಯಮ ವ್ಯಕ್ತಿಗಳೊಂದಿಗೆ ನಡೆಸಿದ ಸಭೆಯೊಂದರಲ್ಲಿ ಪಾಕಿಸ್ತಾನದ ವಿದೇಶ ವ್ಯವಹಾರಗಳ ಸಲಹಾಕಾರ ಸರ್ತಾಝ್ ಅಝೀಝ್ ಅಮೆರಿಕದ ಅಧ್ಯಕ್ಷರ ಅಭಿಪ್ರಾಯವನ್ನು ತಳ್ಳಿಹಾಕಿದರು.
‘‘ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿರುವ ಅಸ್ಥಿರತೆಯ ಬಗ್ಗೆ ಅಮೆರಿಕದ ಅಧ್ಯಕ್ಷರು ಏನು ಹೇಳಿದ್ದಾರೋ, ಅದು ಅವರ ಊಹೆ ಮಾತ್ರ. ಅದಕ್ಕೂ ವಾಸ್ತವಕ್ಕೂ ಸಂಬಂಧವಿಲ್ಲ’’ ಎಂದು ಅಝೀಝ್ ನುಡಿದರು.
Next Story





