ಸಿರಿಯ ಪಟ್ಟಣದಲ್ಲಿ ತೀವ್ರ ಅಪೌಷ್ಟಿಕತೆ: ಯೂನಿಸೆಫ್
ಬೆರೂತ್, ಜ. 15: ಸಿರಿಯದಲ್ಲಿ ಮುತ್ತಿಗೆಗೆ ಒಳಗಾದ ಪಟ್ಟಣ ಮಡಯದ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ವಿಶ್ವಸಂಸ್ಥೆಯ ಮಕ್ಕಳ ನಿಧಿ ಯೂನಿಸೆಫ್ ಶುಕ್ರವಾರ ಖಚಿತಪಡಿಸಿದೆ.
ತಿಂಗಳುಗಳ ಕಾಲ ದಿಗ್ಬಂಧನೆಗೊಳಗಾದ ಈ ಪಟ್ಟಣದ ಸಾವಿರಾರು ಜನರಿಗೆ ಈ ವಾರ ಅಗತ್ಯ ನೆರವು ಒದಗಿಸಲಾಗಿತ್ತು. ‘‘ಮಡಯ ಪಟ್ಟಣದಲ್ಲಿ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಯೂನಿಸೆಫ್ ಖಚಿತ ಪಡಿಸುತ್ತದೆ’’ ಎಂದು ಯೂನಿಸೆಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story





