Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಲಾಲ್‌ಬಾಗ್‌ನಲ್ಲಿ ರಾಷ್ಟ್ರೀಯ ಪುಷ್ಪ...

ಲಾಲ್‌ಬಾಗ್‌ನಲ್ಲಿ ರಾಷ್ಟ್ರೀಯ ಪುಷ್ಪ ಹಬ್ಬ: ಪ್ರಭಾಕರ್ ಚೀಮಸಂದ್ರ

ವಾರ್ತಾಭಾರತಿವಾರ್ತಾಭಾರತಿ15 Jan 2016 11:32 PM IST
share
ಲಾಲ್‌ಬಾಗ್‌ನಲ್ಲಿ ರಾಷ್ಟ್ರೀಯ ಪುಷ್ಪ ಹಬ್ಬ: ಪ್ರಭಾಕರ್ ಚೀಮಸಂದ್ರ

ಬೆಂಗಳೂರು, ಜ. 15: ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯ ತೋಟಗಾರಿಕೆ ಇಲಾಖೆ ಪ್ರತಿವರ್ಷ ಆಯೋಜಿಸುವ ಫಲಪುಷ್ಟ ಪ್ರದರ್ಶನವನ್ನು ಜಿ.ಎಚ್.ಕ್ರುಂಬಿಗಲ್‌ರ 150ನೆ ಜನ್ಮಶತಬ್ದಿ ಅಂಗವಾಗಿ ಈ ಬಾರಿ ರಾಷ್ಟ್ರ ಮಟ್ಟದಲ್ಲಿ ಆಚರಣೆ ಮಾಡಲು ಮೈಸೂರು ಉದ್ಯಾನ ಕಲಾ ಸಂಘದ ಸಹಕಾರದೊಂದಿಗೆ ರಾಜ್ಯ ತೋಟಗಾರಿಕೆ ಇಲಾಖೆ ಮುಂದಾಗಿದೆ.
ಜ.16ರಿಂದ ಹತ್ತು ದಿನಗಳ ಕಾಲ ನಡೆಯುವ ‘ರಾಷ್ಟ್ರೀಯ ಪುಷ್ಪ ಹಬ್ಬ’ಕ್ಕೆ ಇಂದು ಬೆಳಗ್ಗೆ ವಿದ್ಯುಕ್ತವಾಗಿ ಚಾಲನೆ ಸಿಗಲಿದೆ. ಪ್ರದರ್ಶನದಲ್ಲಿ ನೋಡುಗರ ಕಣ್ಮನ ಸೆಳೆಯಲು ಅಸ್ಸಾಂ, ಮಹಾರಾಷ್ಟ್ರ, ಪುಣೆಯಿಂದ 60 ಲಕ್ಷಕ್ಕೂ ಅಧಿಕ ತರಹೇವಾರಿ ಹೂಗಳು ಈಗಾಗಲೇ ಸಸ್ಯಕಾಶಿಗೆ ಬಂದಿಳಿದಿವೆ. ಪುಷ್ಪ ಪ್ರದರ್ಶನಕ್ಕೆ ಪ್ರತೀ ದಿನ 9 ರಿಂದ ಸಂಜೆ 6ರವರೆಗೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಅಲ್ಲದೆ, ಗಾಜಿನ ಮನೆಯ ವಿಶೇಷ ಪುಷ್ಪ ಪ್ರದರ್ಶನ ವೀಕ್ಷಣೆಯ ಕಾಲಾವಧಿಯನ್ನು 6:30ರ ವರೆಗೆ ವಿಸ್ತರಿಸಲಾಗಿದೆ.
ರಾಷ್ಟ್ರೀಯ ಪುಷ್ಪ ಹಬ್ಬಕ್ಕೆ ಸ್ಥಳೀಯ ಪ್ರತಿನಿಧಿಗಳ ಜೊತೆಗೆ ಇದೇ ಮೊದಲ ಬಾರಿಗೆ ಕೇರಳ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳ ಪ್ರತಿನಿಧಿಗಳು ಹಾಗೂ ಪ್ರತಿಷ್ಠಿತ 2,146 ನರ್ಸರಿಗಳು ಭಾಗವಹಿಸುತ್ತಿದ್ದು, ಹೃದಯಾಕಾರದ ಹೂ ಕುಂಡಗಳು, ಮೆಗಾ ಹೂವು ಕುಂಡಗಳು ಮತ್ತು 17 ಅಡಿ ಉದ್ದದ ಮೂರು ಪುಷ್ಪ ವೃಕ್ಷಗಳು ತಲೆಎತ್ತಿವೆ. ಇದಲ್ಲದೆ ಆರ್ಕಿಡ್, ಆಂಥೋರಿಯಂ, ಕಾರ್‌ನೇಷನ್, ಹೆಲಿಕೋನಿಯಾ, ಲಿಲಿಯಂ ಬ್ರಾಸಿಯಾ, ಪಿಗ್‌ನೇರಿಯಾ, ರೆಡ್‌ಹಾಟ್ ಪೋಕರ್, ಆಲ್‌ಸ್ಟ್ರೋಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಟ್ಯೊಬಿರಸ್ ರೂಟೆಡ್ ಸೇರಿದಂತೆ ಹಲವು ಶೀತ ವಲಯದ ವಿಶೇಷ ಹೂಗಳು ನೋಡುಗರನ್ನು ಕೈಬೀಸಿ ಕರೆಯುತ್ತಿವೆ.
 ರಾಷ್ಟ್ರೀಯ ಪುಷ್ಟ ಹಬ್ಬದ ಪ್ರದರ್ಶನದ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ಫುಡ್‌ಕೋರ್ಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಅಲ್ಲದೆ, ತಿರುಗು ಮಾರಾಟಗಾರರಿಗೆ ನಿರ್ಬಂಧ ಹೇರಲಾಗಿದೆ. ಪಾರ್ಕಿನಲ್ಲಿ ಕೇವಲ ಹಣ್ಣು, ಜ್ಯೂಸ್ ಮತ್ತು ಕುಡಿಯಲು ನೀರು ಮಾತ್ರ ಸಿಗಲಿದೆ. ಹೀಗಾಗಿ ಪುಷ್ಟ ಪ್ರದರ್ಶನದ ವೀಕ್ಷಣೆಗೆ ಆಗಮಿಸಲಿರುವ ವೀಕ್ಷಕರು ಮನೆಯಲ್ಲೇ ಊಟೋಪಚಾರವನ್ನು ಮುಗಿಸಿಕೊಂಡು ಬಂದರೆ ಒಳಿತು.


ಹೆಚ್ಚಿನ ಭದ್ರತೆ
ಈ ಬಾರಿ ವಿಶೇಷವಾಗಿ ಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿ 5ರಿಂದ 6 ಲಕ್ಷ ಮಂದಿ ವೀಕ್ಷಕರು ಸೇರುವ ನಿರೀಕ್ಷೆ ಇರುವುದರಿಂದ ತೋಟಗಾರಿಕೆ ಇಲಾಖೆ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 100 ಮಂದಿ ಗೃಹರಕ್ಷಕ ದಳ, ರಾತ್ರಿ ವೇಳೆ ಗಸ್ತಿಗೆ 20 ಪೊಲೀಸರು, 2 ಕೆ ಎಸ್‌ಆರ್‌ಪಿ ತುಕಡಿಯನ್ನು 24 ಗಂಟೆಗಳ ಕಾಲ ಉದ್ಯಾನ ಸುತ್ತಲು ನಿಯೋಜನೆ ಮಾಡಲಾಗಿದೆ. ಅಹಿತಕರ ಘಟನೆ ಸಂಭವಿಸದಂತೆ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಪ್ರವೇಶ ದರ ದುಬಾರಿ...
ಈ ಬಾರಿ ವಿಶೇಷವಾಗಿ ಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿ 5ರಿಂದ 6 ಲಕ್ಷ ಮಂದಿ ವೀಕ್ಷಕರು ಸೇರುವ ನಿರೀಕ್ಷೆ ಇರುವುದರಿಂದ ತೋಟಗಾರಿಕೆ ಇಲಾಖೆ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 100 ಮಂದಿ ಗೃಹರಕ್ಷಕ ದಳ, ರಾತ್ರಿ ವೇಳೆ ಗಸ್ತಿಗೆ 20 ಪೊಲೀಸರು, 2 ಕೆ ಎಸ್‌ಆರ್‌ಪಿ ತುಕಡಿಯನ್ನು 24 ಗಂಟೆಗಳ ಕಾಲ ಉದ್ಯಾನ ಸುತ್ತಲು ನಿಯೋಜನೆ ಮಾಡಲಾಗಿದೆ. ಅಹಿತಕರ ಘಟನೆ ಸಂಭವಿಸದಂತೆ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಗಾಜಿನ ಮನೆಯಲ್ಲಿ ಕ್ರುಂಬಿಗಲ್ ನಿವಾಸ...
ಈ ಬಾರಿಯ ಪುಷ್ಟ ಪ್ರದರ್ಶನವನ್ನು ಜಿ.ಎಚ್.ಕ್ರುಂಬಿಗಲ್‌ರಿಗೆ ಅರ್ಪಿಸಲು ಸಸ್ಯಕಾಶಿಯ ಗಾಜಿನ ಮನೆಯಲ್ಲಿ ಕ್ರುಂಬಿಗಲ್ ಹುಟ್ಟೂರಿನ ನಿವಾಸದ ಮಾದರಿ ಮನೆ ಪುಷ್ಪಗಳಿಂದ ಜನ್ಮ ತಾಳಿದೆ. ಈ ಮಾದರಿ ನಿವಾಸ 480 ಚದರಡಿ ಪ್ರದೇಶದಲ್ಲಿ ಪೆಟೋನಿಯಾ, ಡಯಾಂತಸ್, ಬಿಗೋನಿಯಾ ಸೇರಿದಂತೆ ಇತರೆ 2.60 ಲಕ್ಷಕ್ಕೂ ಅಧಿಕ ಹೂವಿನ ಗಿಡಗಳಿಂದ ಅಲಂಕೃತವಾಗಿದೆ.


ಕ್ರುಂಬಿಗಲ್ ಯಾರು?
ಗುಸ್ತಾವ್ ಹರ್ಮನ್ ಕ್ರುಂಬಿಗಲ್‌ರವರು (ಜನನ-1865 ಡಿ.18, ಮರಣ- 1956 ೆ.8) ಮೂಲತಃ ಜರ್ಮನಿಯ ವಾಸ್ತುಶಿಲ್ಪಿ. ಕ್ಯೂ ಗಾರ್ಡನ್ ಆ್ ಲಂಡನ್‌ನಲ್ಲಿ ತಮ್ಮ ವೃತ್ತಿ ಆರಂಭಿಸಿದ ಇವರು ಬರೋಡಾ ನಗರ ಯೋಜನೆ ನಿರ್ಮಾಣದ ಜತೆಗೆ ಹಲವು ಅರಮನೆಗಳನ್ನೂ ನಿರ್ಮಿಸಿದರು. ಇವರು ಸುಮಾರು 27ನೇ ವಯಸ್ಸಿಗೇ ಬೆಂಗಳೂರಿಗೆ ಬಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನಕ್ಕೆ ಬರಮಾಡಿಕೊಂಡರು. ಕೆಆರ್‌ಎಸ್‌ನ ಬೃಂದಾವನ ಗಾರ್ಡನ್, ಊಟಿಯ ಬೊಟಾನಿಕಲ್ ಗಾರ್ಡನ್, ಕಬ್ಬನ್‌ಪಾರ್ಕ್ ಹೀಗೆ ಹಲವು ಉದ್ಯಾನಗಳ ನಿಮಾರ್ಣದಲ್ಲಿ ಇವರ ಕೈಚಳಕವಿದೆ. ಕರ್ನಾಟಕದ ಪ್ರಥಮ ಮುಖ್ಯ ವಾಸ್ತುಶಿಲ್ಪಿಯಾಗಿದ್ದ ಕ್ರುಂಬಿಗಲ್‌ರು ಗಾರ್ಡನ್ ಸೂಪರಿಂಟೆಂಡೆಂಟ್ ಆಗಿ ಲಾಲ್‌ಬಾಗ್‌ನ ಅಭಿವೃದ್ಧಿಗೂ ಶ್ರಮಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X