ನಾಗರಿಕರನ್ನು ಎಚ್ಚರಿಸುವ ಶಕ್ತಿ ಛಾಯಾಚಿತ್ರಕ್ಕಿದೆ: ಪ್ರೊ.ರಾಜೀವ್ ಗೌಡ

ಬೆಂಗಳೂರು, ಜ.15: ಸರಕಾರಗಳ ಧೋರಣೆಗಳ ವಿರುದ್ಧ ನಾಗರಿಕರನ್ನು ಎಚ್ಚರಿಸಿ, ಜಾಗೃತಗೊಳಿಸುವ ಕಾರ್ಯವನ್ನು ಒಂದು ಛಾಯಾಚಿತ್ರ ಮಾಡುತ್ತದೆ ಎಂದರೆ ಆ ಚಿತ್ರಕ್ಕಿರುವ ಅಗಾಧ ಶಕ್ತಿ ಸಂಕೇತಕ್ಕೆ ಸಾಕ್ಷಿ ಎಂದು ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್ ಗೌಡ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಏರ್ಪಡಿಸಿದ್ದ ಕರ್ನಾಟಕ ೆಟೋ ನ್ಯೂಸ್(ಕೆಪಿಎನ್)ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೊಮಾಲಿ ಯಾದಲ್ಲಿ ಮಗುವೊಂದು ಹಸಿವಿನಿಂದ ಇನ್ನೇನು ಸಾಯಲಿದ್ದು, ಅದಕ್ಕಾಗಿ ರಣಹದ್ದು ಕಾದು ಕುಳಿತಿದ್ದ ಛಾಯಾಚಿತ್ರ ವಿಶ್ವದ ಕಣ್ಣು ತೆರೆಸಿತು ಎಂದು ಶ್ಲಾಘಿಸಿದರು.
ಸಿರಿಯಾ ಸಮುದ್ರ ತೀರದಲ್ಲಿ ಇತ್ತೀಚೆಗೆ ಮೃತಪಟ್ಟ ಬಾಲಕನೊಬ್ಬನ ಚಿತ್ರ ನೋಡಿ ಅಲ್ಲಿನ ನಿರಾಶ್ರಿತರಿಗೆ ಆಶ್ರಯ ನೀಡಬೇಕೆಂಬ ಆಂದೋಲನ ಆರಂಭವಾ ಯಿತು. ವಿಯೆಟ್ನಾಂನಲ್ಲಿ ಅಣುಬಾಂಬ್‌ನಿಂದ ಜರ್ಜ ರಿತವಾಗಿದ್ದ ಮಗುವೊಂದು ವಿವಸವಾಗಿ ನಡೆದು ಹೋಗುತ್ತಿದ್ದ ಚಿತ್ರ ನೋಡಿ ಅಮೆರಿಕದ ನಾಗರಿಕರೇ ಅಲ್ಲಿನ ಸರಕಾರದ ವಿರುದ್ಧ ತಿರುಗಿ ಬಿದ್ದು ಪ್ರತಿಭಟನೆ ನಡೆಸಿದರು ಎಂದು ಅವರು ಛಾಯಾಚಿತ್ರಗಳ ಹಿಂದಿನ ಕತೆಗಳನ್ನು ಬಿಚ್ಚಿಟ್ಟರು.
ಸಾವಿರ ಪದಗಳಿಗೆ ಸಮ: ನಗರದ ಬೆಡಗಿನೊಂದಿಗೆ ಗ್ರಾಮ್ಯ ಸೊಗಡನ್ನೂ ಬಿಂಬಿಸುವ ಛಾಯಾಚಿತ್ರಗಳಲ್ಲಿ ಸೆರೆ ಹಿಡಿದಿರುವ ಕರ್ನಾಟಕ ೆಟೋ ನ್ಯೂಸ್(ಕೆಪಿಎನ್) ಕಾರ್ಯ ಶ್ಲಾಘನೀಯ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದರು.
ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ. ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಸೇರಿದಂತೆ ಹಲವು ವಿಭಾಗಗಳಲ್ಲಿ ಛಾಯಾಚಿತ್ರ ಸೆರೆ ಹಿಡಿಯುವ ಪ್ರಯತ್ನವನ್ನು ಕೆಪಿಎನ್ ನಿರಂತರವಾಗಿ ಮಾಡುತ್ತಿದೆ ಎಂದ ಅವರು, ತಾಲೂಕು ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೂ ತಲುಪಿಸುವ ಕಾರ್ಯವನ್ನು ಕೆಪಿಎನ್ ಮಾಡಲಾಗುತ್ತಿದೆ ಎಂದು ಅಭಿನಂದಿಸಿದರು.
ಒಂದು ದಶಕದಲ್ಲಿ ಕೆಪಿಎನ್ ತೆಗೆದ ಅಪರೂಪದ ಛಾಯಾಚಿತ್ರಗಳ ಕೃತಿಯನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಆಹಾರ ತಜ್ಞ ಕೆ.ಸಿ. ರಘು, ಕೆಪಿಎನ್ ಸಂಸ್ಥಾಪಕ ಸಗ್ಗೆರೆ ರಾಮಸ್ವಾಮಿ ಮತ್ತಿತರರು ಹಾಜರಿದ್ದರು.





