ಝಡ್+ ಭದ್ರತೆೆ ನೀಡಿದರೆ ಯಡಿಯೂರಪ್ಪ-ಶೋಭಾ ಮದುವೆ ಸಿಡಿ ಬಿಡುಗಡೆ : ಪದ್ಮನಾಭ ಪ್ರಸನ್ನ
ಉಡುಪಿ, ಜ.15: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಿವಮೊಗ್ಗ ಸಂಸದ ಬಿ.ಎಸ್.ಯಡಿ ಯೂರಪ್ಪ ಹಾಗೂ ಮಾಜಿ ಸಚಿವೆ ಹಾಗೂ ಹಾಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ತಿರುಪತಿಯಲ್ಲಿ ಆದ ಮರುಮದುವೆಯ ಸಿಡಿ ತನ್ನ ಬಳಿ ಇದ್ದು, ತನಗೆ ಝಡ್ ಪ್ಲಸ್ ಕೆಟಗರಿ ಭದ್ರತೆ ನೀಡಿದರೆ ಇದನ್ನು ಬಹಿರಂಗ ಪಡಿಸುವುದಾಗಿ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿ ಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಶೋಭಾ ಕೇರಳದ ದೇವಸ್ಥಾನವೊಂದರಲ್ಲಿ ರಹಸ್ಯವಾಗಿ ಮದುವೆಯಾಗಿದ್ದರು. ಬಳಿಕ ಜ್ಯೋತಿಷಿಯೊಬ್ಬರ ಸಲಹೆಯಂತೆ ತಿರುಪತಿಯಲ್ಲಿ ಮರು ಮದುವೆಯಾಗಿ ದ್ದರು. ಈ ಮದುವೆಯ ಸಿಡಿ ಇದೀಗ ತನ್ನ ಬಳಿ ಇದ್ದು, ಇದನ್ನು ನನಗೆ ನೀಡಿದವರು ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಅವರ ಆಪ್ತ ಸಹಾಯಕರಾ ಗಿದ್ದ ಸಿದ್ದಲಿಂಗ ಸ್ವಾಮಿ ಅವರು ಎಂದರು.
‘ನಾನು ಈ ಸಿಡಿಯನ್ನು ಯಾವಾಗ ಬೇಕಿದ್ದರೂ ಬಹಿರಂಗಗೊಳಿಸಬಲ್ಲೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಝಡ್ ಪ್ಲಸ್ ಭದ್ರತೆ ನೀಡಬೇಕು.’ ಎಂದರು. ಸಿದ್ಧಲಿಂಗ ಸ್ವಾಮಿ ನಿಮಗೆ ಯಾಕೆ ಸಿಡಿ ನೀಡಿದರು ಎಂದು ಪ್ರಶ್ನಿಸಿದಾಗ, ರಾಜ್ಯದಲ್ಲಿ ಬಿಜೆಪಿ ಸರಕಾರದ ಸಮಯದಲ್ಲಿ ಮೈಸೂರಿನ ಉಸ್ತುವಾರಿಯ ವಿಷಯದಲ್ಲಿ ಸಿದ್ಲಿಂಗ ಸ್ವಾಮಿ ಹಾಗೂ ಶೋಭಾ ನಡುವಿನ ಜಗಳ ತಾರಕ್ಕೇರಿತ್ತು. ಇದರಲ್ಲಿ ಸ್ವಾಮಿಗೆ ಹಿನ್ನಡೆಯಾಗಿತ್ತು. ಇದರಿಂದ ಸಿಟ್ಟಿಗೆದ್ದ ಅವರು ಸಿಡಿಯನ್ನು ನನಗೆ ನೀಡಿದ್ದರು ಎಂದರು. ಪ್ರಮಾಣ ಮಾಡಲಿ: ಯಡಿಯೂರಪ್ಪ ಮತ್ತು ಶೋಭಾ ಕೇರಳದ ರಾಜರಾಜೇಶ್ವರಿ ಭಗವತಿ ಅಮ್ಮ ದೇವಸ್ಥಾನದಲ್ಲಿ ಶಾಸ್ತ್ರೋಸ್ರವಾಗಿ ಮದುವೆಯಾಗಿದ್ದರು. ತಿರುಪತಿಯಲ್ಲಿ ಮದುವೆಯಾದರೆ ಒಳ್ಳೆಯ ಯೋಗವಿದೆ ಎಂದು ಜ್ಯೋತಿಷಿ ಹೇಳಿದ್ದರಿಂದ ನಂತರ ಮಧ್ಯರಾತ್ರಿ 1 ಗಂಟೆಗೆ ತಿರುಪತಿಯಲ್ಲಿ ಮರುಮದುವೆಯಾಗಿದ್ದರು. ಆದರೆ, ಈಗಲೂ ಇಬ್ಬರೂ ಮದುವೆಯನ್ನು ರಹಸ್ಯವಾಗಿಟ್ಟಿದ್ದಾರೆ ಎಂದರು.
ಇದಕ್ಕೆ ಇನ್ನಷ್ಟು ಪುರಾವೆಗಳಿವೆಯೇ ಕೇಳಿದಾಗ, ಯಡಿಯೂರಪ್ಪ ಮತ್ತು ಶೋಭಾ ಧರ್ಮಸ್ಥಳಕ್ಕೆ ಬಂದು ಮಂಜುನಾಥನ ಎದುರು ನಾವು ಮದುವೆಯಾಗಿಲ್ಲ ಎಂದು ಪ್ರಮಾಣ ಮಾಡಲಿ, ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದವರು ಸವಾಲು ಹಾಕಿದರು.
ಅಪಹರಣ: ಈ ಬಗ್ಗೆ ನಿಮಗೆ ಯಡಿಯೂರಪ್ಪ ಜೀವಬೆದರಿಕೆ ಹಾಕಿದ್ದಾರಾ ಎಂದು ಕೇಳಿದಾಗ, ಅವರು ನನ್ನನ್ನು ಅಪರಹಣ ಮಾಡಿಸಿದ್ದರು. ಕೆಜೆಪಿಗೆ ಸಂಬಂಧಿಸಿ ದಂತೆ ಇದ್ದ ವಿವಾದದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಕಡೆಯ ನಾಲ್ವರು ನನ್ನನ್ನು ಶಾಂತಿನಗರದ ಮನೆಯಿಂದ ಅಪಹರಿಸಿಕೊಂಡು ಹೋಗಿದ್ದರು. ಹಿಂದಿ ಭಾಷೆ ಮಾತನಾಡುತ್ತಿದ್ದ ಅವರು ಒಂದು ವಾರ ಕಾಲ ಉತ್ತರ ಭಾರತದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ತಿರುಗಿಸಿ ಕೊನೆಗೆ ರಾಜಸ್ತಾನ-ದಿಲ್ಲಿ ಗಡಿಯಲ್ಲಿರುವ ಬದ್ರಾಪುರ ಠಾಣಾ ವ್ಯಾಪ್ತಿಯಲ್ಲಿ ಬಿಟ್ಟು ಹೋಗಿದ್ದರು. ಆಗ ನಾನು ಬದ್ರಾಪುರ ಠಾಣೆಯಲ್ಲಿ ಅಪಹರಣ ಕೇಸು ದಾಖಲಿಸಿದ್ದೇನೆ. ಅದರ ಪ್ರತಿ ನನ್ನ ಬಳಿ ಇದೆ ಎಂದರು. ಆದರೆ, ಬೆಂಗಳೂರಿನಲ್ಲಿ ರಾಜ್ಯ ಪೊಲೀಸರು ನಾನು ಕೊಟ್ಟ ಅಪಹರಣ ಕೇಸನ್ನು ದಾಖಲಿಸಲೇ ಇಲ್ಲ ಎಂದ ವರು ದೂರಿದರು. ಕೆಜೆಪಿ ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಂಡಿಲ್ಲ. ಮುಂದಿನ ಜಿಪಂ, ತಾಪಂ ಚುನಾವಣೆ ಯಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ ಎಂದರು.
ಪಕ್ಷದ ಪದಾಧಿಕಾರಿಗಳಾದ ಶ್ರೀಲತಾ, ಧರ್ಮೇಂದ್ರ, ರಾಜಣ್ಣ, ಗೋವಿಂದರಾಜ್ ಉಪಸ್ಥಿತರಿದ್ದರು.







