ಸ್ನೇಹ ಶಾಲೆಯಲ್ಲಿ ‘ಬಯಲು ಸೂರ್ಯ ಆಲಯ’ ಸ್ಥಾಪನೆ

ಸುಳ್ಯ, ಜ.15: ಸುಳ್ಯದ ಸ್ನೇಹ ಶಿಕ್ಷಣಸಂಸ್ಥೆಯ ವಠಾರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಬಯಲು ಸೂರ್ಯ ಆಲಯ’ದ ಅನಾವರಣ ಮತ್ತು ಯೋಗಕೇಂದ್ರದ ಉದ್ಘಾಟನೆ ದರ್ಬೆತ್ತಡ್ಕ ಶಂಕರ ವೇದವಿದ್ಯಾ ಗುರುಕುಲದ ಪ್ರಾಚಾರ್ಯ ಘನಪಾಟಿ ಅಂಶುಮಾನ್ ಅಭ್ಯಂಕರ್ ನೇತೃತ್ವದಲ್ಲಿ ನಡೆಯಿತು.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಯೋಗಕೇಂದ್ರ ಉದ್ಘಾಟಿಸಿದರು. ಈ ಸಂದರ್ಭ ಯೋಗಕೇಂದ್ರ ಉದ್ಘಾಟಿಸಿದರು. ಶಿಲ್ಪಿ ಪಾಂಡುರಂಗ ಪಾಠಕ್, ಕಾರ್ಮಿಕರಾದ ಸುಬ್ರಹ್ಮಣ್ಯ, ನಾರಾಯಣ ಶಿಬಾಜೆ, ವಾಸು, ಕುಶಾಲಪ್ಪರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಅಂಗಾರ, ಸುಳ್ಯ ಅಕಾಡಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ.ದಿವಾಕರ ರೈ, ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪಾಲೆಪ್ಪಾಡಿ ಗಣಪಯ್ಯ ಭಟ್, ಚೊಕ್ಕಾಡಿ ಶ್ರೀರಾಮ ದೇವಾಲಯದ ಗೌರವ ಸಲಹೆಗಾರ ಆನೆಕಾರ ಗಣಪಯ್ಯ ಭಟ್, ಕಾಯರ್ತೋಡಿ ಮಹಾವಿಷ್ಣು ದೇವಾಲಯದ ಉತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ರೋಟರಿ ಅಧ್ಯಕ್ಷ ಬೆಳಿಯಪ್ಪಗೌಡ, ಲಯನ್ಸ್ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ, ಉಪೇಂದ್ರ ಕಾಮತ್, ಶ್ರೀನಿವಾಸ್ ರಾವ್ ಪೈಲೂರು, ಭೀಮರಾವ್ ವಾಷ್ಠರ್, ಜಗನ್ಮೋಹನ ರೈ ಮರ್ಕಂಜ, ಕೆ.ಆರ್.ಗಂಗಾಧರ, ಭಕ್ತವತ್ಸಲ ನೀರಬಿದಿರೆ, ಲತಾಮಧುಸೂದನ್, ಪ್ರೊ.ಶ್ರೀಕೃಷ್ಣ ಭಟ್, ಪಿ.ಕೆ. ಉಮೇಶ್ ಉಪಸ್ಥಿತರಿದ್ದರು
ಸಮೀರ ದಾಮ್ಲೆ ಕಾರ್ಯಕ್ರಮ ನಿರೂಪಿಸಿದರು. ಡಾ.ವಿದ್ಯಾಶಾಂಭವ ಪಾರೆ ವಂದಿಸಿದರು. ಸಂಸ್ಥೆಯ ನಿರ್ದೇಶಕ ಶ್ರೀಕರ ದಾಮ್ಲೆ, ಮುಖ್ಯ ಶಿಕ್ಷಕಿ ಜಯಲಕ್ಷ್ಮ್ಮೀ ದಾಮ್ಲೆ ಸಹಕರಿಸಿದರು.





