ಸಿಡ್ನಿ ಓಪನ್: ಸ್ವೆತ್ಲಾನಾ ಮಹಿಳೆಯರ ಸಿಂಗಲ್ಸ್ ಚಾಂಪಿಯನ್

ಸಿಡ್ನಿ, ಜ.15: ವಿಶ್ವದ ನಂ.25ನೆ ಆಟಗಾರ್ತಿ ಸ್ವೆತ್ಲಾನಾ ಕುಝ್ನೆಸೋವಾ ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದಾರೆ.
ಶುಕ್ರವಾರ ಏಕಪಕ್ಷೀಯವಾಗಿ ನಡೆದ ಫೈನಲ್ ಪಂದ್ಯದಲ್ಲಿ 30ರ ಹರೆಯದ ಮಾಜಿ ಫ್ರೆಂಚ್ ಹಾಗೂ ಅಮೆರಿಕನ್ ಓಪನ್ ಚಾಂಪಿಯನ್ ಕುಝ್ನೆಸೋವಾ ಅವರು ಮೊನಿಕಾ ಪುಯೆಗ್‌ರನ್ನು 7-6(5), 4-6, 6-3 ಸೆಟ್‌ಗಳಿಂದ ಮಣಿಸಿದರು. ಈ ಮೂಲಕ 16ನೆ ಡಬ್ಲ್ಯುಟಿಎ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
8 ವರ್ಷಗಳ ಬಳಿಕ ಸಿಡ್ನಿ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪಂದ್ಯ ಆಡಿರುವ ರಶ್ಯದ ಕುಝ್ನೆಸೋವಾ ಉತ್ಸಾಹದಿಂದ ಆಡಿ ಗಮನ ಸೆಳೆದರು. ಶುಕ್ರವಾರ 2 ಗಂಟೆಗೂ ಅಧಿಕ ಕಾಲ ನಡೆದ ಸೆಮಿಫೈನಲ್‌ನಲ್ಲಿ ಕುಝ್ನೆಸೋವಾ ಅವರು ವಿಶ್ವದ ನಂ.2ನೆ ಆಟಗಾರ್ತಿ ಸಿಮೊನಾ ಹಾಲೆಪ್‌ರನ್ನು 7-6(5), 4-6, 6-3 ಸೆಟ್‌ಗಳಿಂದ ಮಣಿಸಿ ಫೈನಲ್‌ಗೆ ತಲುಪಿದ್ದರು.
Next Story





