ಹೆಣ್ಣು ಮಕ್ಕಳ ಶಿಕ್ಷಣ ಕುರಿತು ಸೈಕಲ್ ಜಾಥಾ
ಬೆಳ್ತಂಗಡಿ, ಜ.15: ಕಪುಚಿನ್ ಕೃಷಿಕ ಸೇವಾ ಕೇಂದ್ರ ದಯಾಳ್ ಬಾಗ್ ವಿಮುಕ್ತಿಯ ವತಿಯಿಂದ ಚೈಲ್ಡ್ ಫಂಡ್ ಇಂಡಿಯಾದ ಸಹಭಾಗಿತ್ವದಲ್ಲಿ ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೈಕಲ್ ಜಾಥಾವನ್ನು ನಡ ವಲಯದಲ್ಲಿ ನಡೆಯಿತು. ನಡ ಗ್ರಾಪಂ ಉಪಾಧ್ಯಕ್ಷ ಸುಧಾಕರ್ ಮಾತನಾಡಿ, ಪ್ರಾಚೀನ ಕಾಲದಲ್ಲಿ ಹೆಣ್ಣಿನ ಸ್ಥಾನಮಾನ ತೀರಾ ಶೋಚನೀಯವಾಗಿತ್ತು. ಆದರೆ ಇದೀಗ ಅದೇ ಹೆಣ್ಣು ರಾಜಕೀಯ, ಸಾಮಾಜಿಕ, ವೈದ್ಯಕೀಯ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಮೋಘವಾದಂತಹ ಸಾಧನೆಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಂಸ್ಥೆಯ ಸಹ ನಿರ್ದೇಶಕ ವಂ.ಫಾ.ಅಮರ್ ಲೋಬೊ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ, ಸಂಸ್ಥೆಯ ವಲಯ ಕಾರ್ಯಕರ್ತೆ ಜಲಜಾ ಉಪಸ್ಥಿತರಿದ್ದರು. ಅನುರಾಧಾ ಕಾರ್ಯಕ್ರಮ ನಿರೂಪಿಸಿದರು.
Next Story





