ಹವ್ಯಾಸಿ ಪತ್ರಿಕೋದ್ಯಮ ತರಬೇತಿ ಕಾರ್ಯಾಗಾರ
ಮಂಗಳೂರು, ಜ.15: ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘ ಮಂಗಳೂರು ಇದರ ವತಿಯಿಂದ ಸಾಹಿತ್ಯಾಸಕ್ತ ಮಹಿಳೆಯರಿಗಾಗಿ ‘ಹವ್ಯಾಸಿ ಪತ್ರಿಕೋದ್ಯಮ’ ತರಬೇತಿ ಕಾರ್ಯಾಗಾರ ಗುರುವಾರ ನಗರದ ಹಿದಾಯತ್ ಸೆಂಟರ್ ಸಭಾಂಗಣದಲ್ಲಿ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ‘ವಾರ್ತಾಭಾರತಿ’ ಪತ್ರಿಕೆಯ ಸುದ್ದಿ ಸಂಪಾದಕ ಬಿ.ಎಂ. ಬಶೀರ್, ಬರವಣಿಗೆ ಆರಂಭಿಸಲು ಬೇಕಾದ ಅಂಶಗಳು, ಹವ್ಯಾಸಿ ಪತ್ರಕರ್ತರಲ್ಲಿರಬೇಕಾದ ಗುಣಗಳು ಹಾಗೂ ಹವ್ಯಾಸಿ ಪತ್ರಿಕೋದ್ಯಮಕ್ಕೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಪದಗಳ ಶ್ರೀಮಂತಿಕೆ ಮತ್ತು ಭಾಷಾ ಸ್ವಚ್ಛತೆಗೆ ಓದು ಮುಖ್ಯ. ಬರಹಗಾರರು ಮೊದಲು ಓದುಗರಾಗಬೇಕು ಎಂದು ಅವರು ಹೇಳಿದರು. ಬಳಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.
ಸಂಘದ ಗೌರವಾಧ್ಯಕ್ಷೆ ಶಹನಾಝ್ಎಂ. ಸಮಾರೋಪ ಭಾಷಣ ಮಾಡಿದರು. ಸಂಘದ ಅಧ್ಯಕ್ಷೆ ಸಮೀನ ಅಫ್ಶಾನ್ ಸ್ವಾಗತಿಸಿದರು. ಸಲ್ಮಾ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಝಹುರಾ ಅಬ್ಬಾಸ್ ವಂದಿಸಿದರು.
Next Story





