Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಇತಿಹಾಸದ ಆರ್ಥಿಕ ದುರಂತಗಳನ್ನು...

ಇತಿಹಾಸದ ಆರ್ಥಿಕ ದುರಂತಗಳನ್ನು ತೆರೆದಿಡುವ ಕೃತಿ

ಕಾರುಣ್ಯಕಾರುಣ್ಯ15 Jan 2016 11:58 PM IST
share
ಇತಿಹಾಸದ ಆರ್ಥಿಕ ದುರಂತಗಳನ್ನು ತೆರೆದಿಡುವ ಕೃತಿ

ಇರ್ಫಾನ್ ಹಬೀಬ್ ಅವರು ಭಾರತದ ಖ್ಯಾತ ಇತಿಹಾಸ ಶಾಸ್ತ್ರಜ್ಞ. ಇತಿಹಾಸ ಮತ್ತು ಅರ್ಥಶಾಸ್ತ್ರದ ಸಮನ್ವಯಿಕೆಯ ಮೂಲಕ ಭಾರತದ ವರ್ತಮಾನವನ್ನು ವಿಶ್ಲೇಶಿಸಿದವರಲ್ಲಿ ಇರ್ಫಾನ್ ಹಬೀಬ್ ಪ್ರಮುಖರು. ಅವರ ಸಂಪಾದಕತ್ವದಲ್ಲಿ ‘ಅಲಿಗರ್ ಹಿಸ್ಟೋರಿಯನ್ಸ್ ಸೊಸೈಟಿ’ ಹೊರತಂದಿರುವ ‘ಎ ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ’ ಸರಣಿ ಕೃತಿಗಳನ್ನು ‘ಭಾರತದ ಜನ ಇತಿಹಾಸ’ ಎಂಬ ತಲೆಬರಹದಲ್ಲಿ ಚಿಂತನ ಪ್ರಕಾಶನ ಹೊರತರುತ್ತಿದೆ. ಆ ಸರಣಿಯ ಭಾಗವಾಗಿ, ‘ಭಾರತದ ಆರ್ಥಿಕತೆ-1858-1914’ ಇರ್ಫಾನ್ ಹಬೀಬರ ಈ ಕೃತಿಯನ್ನು ಕೆ. ಎಂ. ಲೋಕೇಶ್ ಕನ್ನಡಕ್ಕಿಳಿಸಿದ್ದಾರೆ. ಇತಿಹಾಸ ಮತ್ತು ಅರ್ಥಶಾಸ್ತ್ರದ ಶಾಸ್ತ್ರೀಯತೆಯ ಜೊತೆಗೇ ಈ ವಿಶ್ಲೇಷಣೆ ಮಂಡಿಸಲ್ಪಟ್ಟಿರುವುದರಿಂದ, ಇದರ ಕನ್ನಡೀಕರಣದ ಕೆಲಸ ಸಾಮಾನ್ಯವಾದದ್ದಲ್ಲ. ಲೋಕೇಶ್ ಅದನ್ನು ಕನ್ನಡದಲ್ಲಿ ಸರಳವಾಗಿ ಅನುವಾದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದೇ ಹೇಳಬಹುದು. ಜನಸಾಮಾನ್ಯರು, ಇತಿಹಾಸ ಮತ್ತು ಅರ್ಥಶಾಸ್ತ್ರದ ವಿದ್ಯಾರ್ಥಿಗಳೂ ಓದಬಹುದಾದ ಕೃತಿಯಾಗಿ ಇದು ಮುಖ್ಯವಾಗುತ್ತದೆ. 1858-1914ರ ನಡುವೆ ವಸಾಹತುಶಾಹಿ ಆಡಳಿತದಲ್ಲಿ ಭಾರತದ ಆರ್ಥಿಕತೆ ತನ್ನ ಸಾಂಪ್ರದಾಯಿಕ ನೆಲೆಗಟ್ಟನ್ನು ಕಳೆದುಕೊಂಡು, ಹೇಗೆ ಶೋಷಣೆಯುಕ್ತ ವ್ಯವಸ್ಥೆಯೊಳಗೆ ಸೆಳೆಯಲ್ಪಟ್ಟಿತು ಮತ್ತು ಅದು ಭಾರತದ ಸಮಾಜ ಮತ್ತು ಜನಜೀವನದ ಮೇಲೆಬೀರಿದ ಪರಿಣಾಮಗಳೇನು ಎನ್ನುವುದನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸುತ್ತಾರೆ. ಅಂದಿನ ಭಾರತದ ಜನಸಂಖ್ಯೆ, ತಲಾ ವರಮಾನ, ರಾಷ್ಟ್ರೀಯ ವರಮಾನ, ಬ್ರಿಟಿಷರ ನಾಣ್ಯ ಪದ್ಧತಿ, ಮಾಪನ ಮೊದಲಾದಂತಹ ಬಿಡಿ ವಿಷಯಗಳನ್ನೂ ಅತ್ಯಂತ ಕುತೂಹಲಕಾರಿಯಾಗಿ ನಿರೂಪಿಸು ತ್ತಾರೆ. ವಸಾಹತು ಶಾಹಿಯ ಕ್ರೌರ್ಯಕ್ಕೆ ಹೇಗೆ ಭಾರತದ ಸಾಂಪ್ರದಾಯಿಕ ಅರ್ಥವ್ಯವಸ್ಥೆ ನಲುಗಿತು ಮತ್ತು ಭಾರತ ಬಡತನ, ಬರ ಇತ್ಯಾದಿಗಳಿಂದ ತತ್ತರಿಸಿತು ಎನ್ನುವುದರ ವಿವರಗಳನ್ನು ಈ ಕೃತಿ ನೀಡುತ್ತದೆ. ಗುಜರಾತ್, ಮಹಾರಾಷ್ಟ್ರಗಳ ಬಡತನ, ಅಸ್ಸಾಂನ ಬಡಕೂಲಿಕಾರ್ಮಿಕರು, ಬೊಂಬಾಯಿ ಮಿಲ್ಲುಗಳ ಶ್ರಮಿಕರ ಸ್ಥಿತಿಗತಿ, ತೆರಿಗೆ ಪದ್ಧತಿ ಇವುಗಳನ್ನು ಎಳೆ ಎಳೆಯಾಗಿ ಲೇಖಕರು ಸರಳ ಭಾಷೆಯಲ್ಲಿ ವಿಶ್ಲೇಷಿಸುತ್ತಾರೆ. ಬೆನ್ನುಡಿಯಲ್ಲಿ ಹೇಳಿದಂತೆ, ಇಂತಹ ಕ್ಲಿಷ್ಟಕರ ಗ್ರಂಥವನ್ನು ಅನುವಾದಿಸುವುದು ಸ್ವತಂತ್ರ ಗ್ರಂಥ ರಚನೆಯಷ್ಟೇ ಕಷ್ಟದ ಕೆಲಸ. ಗ್ರಂಥದಲ್ಲಿ ಕಂಡು ಬರುವ ಸೂಕ್ಷ್ಮಾತಿ ಸೂಕ್ಷ್ಮ ಪದರಗಳನ್ನು, ಪ್ರತಿಪಾದನೆಗಳನ್ನು ಹಾಗೂ ನವಿರಾದ ನಿರೂಪಣೆಗಳನ್ನು ಇರ್ಫಾನ್ ಹಬೀಬರ ಊಹಿತ ಆಶಯಕ್ಕೆ ಭಂಗ ಬರದಂತೆ ಮರು ನಿರೂಪಿಸುವ ಕೆಲಸದಲ್ಲಿ ಲೋಕೇಶ್ ಯಶಸ್ವಿಯಾಗಿದ್ದಾರೆ.

ಚಿಂತನ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 180 ರೂ. ಆಸಕ್ತರು 99022 49150 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯ
ಕಾರುಣ್ಯ
Next Story
X