ಮದ್ರಸ ಮಕ್ಕಳ ಮೀಲಾದ್ ಜಲ್ಸಾ
ಕಿನ್ನಿಗೋಳಿ, ಜ.15: ಪ್ರವಾದಿ ಮುಹಮ್ಮದ್ (ಸ.)ರವರ ಜನ್ಮ ತಿಂಗಳ ಪ್ರಯುಕ್ತ ಕಿನ್ನಿಗೋಳಿಯ ಗೋಳಿಜೋರ ಮುಹಮ್ಮದೀಯಾ ಮದ್ರಸದ ವಿದ್ಯಾರ್ಥಿಗಳಿಂದ ಮೀಲಾದ್ ಜಲ್ಸಾ ಕಾರ್ಯಕ್ರಮ ನಡೆಯಿತು.
ಸೈಯದ್ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಉಜಿರೆ ಮುಖ್ಯ ಭಾಷಣ ಮಾಡಿದರು. ವೇದಿಕೆಯಲ್ಲಿ ಪುನರೂರು ಜುಮಾ ಮಸ್ಜಿದ್ ಖತೀಬ್ ಅಶ್ರಫ್ ಅಂಜದಿ, ಗೌರವಾಧ್ಯಕ್ಷ ಪಿ.ಎಸ್.ಹಮೀದ್ ಮಿಲನ್, ಉಪಾಧ್ಯಕ್ಷ ಉಮರ್ ಅಸಾದಿ, ಕೋಶಾಧಿಕಾರಿ ರಿಝ್ವಿನ್ ಅಹ್ಮದ್ ಪುನರೂರು, ಕಾರ್ಯದರ್ಶಿ ಸಾಬ್‌ಜಾನ್ ಸಾಹೇಬ್, ಅಧ್ಯಕ್ಷ ಟಿ.ಮಯ್ಯದ್ದಿ, ಸಜ್ಜಾದ್ ಆಲಂ, ಕಿನ್ನಿಗೋಳಿ ಜುಮಾ ಮಸ್ಜಿದ್‌ನ ಖತೀಬ್ ಅಬ್ದುಲ್ಲತೀಫ್ ಸಖಾಫಿ, ಅಶ್ರಫ್ ಮುಸ್ಲಿಯಾರ್, ಅಮೀರ್ ಗೋಳಿಜೋರ ಉಪಸ್ಥಿತರಿದ್ದರು. ಹಸನ್ ಸಖಾಫಿ ಸ್ವಾಗತಿಸಿದರು. ಅಬ್ದುರ್ರಹ್ಮಾನ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
Next Story





