ಮುತಾಲಿಕ್‌ಗೆ ಗೋವಾ ಪ್ರವೇಶ ನಿಷೇಧ ವಿಸ್ತರಣೆ

ಪಣಜಿ, ಜ.15: ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್‌ಗೆ ಗೋವಾ ಪ್ರವೇಶಕ್ಕೆ ಅಲ್ಲಿನ ಸರಕಾರ ವಿಧಿಸಿದ್ದ ನಿಷೇಧವನ್ನು ಮುಂದಿನ ಮಾರ್ಚ್ 15ರ ತನಕ ವಿಸ್ತರಿಸಿದೆ.
ಉತ್ತರ ಗೋವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಮುತಾಲಿಕ್‌ಗೆ ಗೋವಾ ಪ್ರವೇಶವನ್ನು ಇನ್ನೂ 60 ದಿನಗಳಿಗೆ ವಿಸ್ತರಿಸಿದೆ. ಈ ಹಿಂದೆ ವಿಧಿಸಿದ್ದ ನಿಷೇಧವು 2016, ಜನವರಿ 16ಕ್ಕೆ ಕೊನೆಗೊಳ್ಳಲಿತ್ತು.
ನಿಷೇಧದ ಅವಧಿಯಲ್ಲಿ ಪ್ರಮೋದ್ ಮುತಾಲಿಕ್ ಮತ್ತು ಅವರ ಸಂಘಟನೆಯ ಮುಖಂಡರು ಗೋವಾಕ್ಕೆ ಪ್ರವೇಶ ನಿಷೇಧಿಸಲಾಗಿದೆ.
ಪ್ರಮೋದ್ ಮುತಾಲಿಕ್‌ಗೆ ಗೋವಾ ಪ್ರವೇಶಕ್ಕೆ ಅವಕಾಶ ನೀಡಿದರೆ, ಗೋವಾ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇರುವ ಬಗ್ಗೆ ಪೊಲೀಸ್ ಇಲಾಖೆ ನೀಡಿರುವ ವರದಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಈ ನಿರ್ಧಾರ ಕೈಗೊಂಡಿದೆ.
ಪ್ರಮೋದ್ ಮುತಾಲಿಕ್ ಮತ್ತು ಅವರ ಶ್ರೀರಾಮ ಸೇನೆಯ ಮುಖಂಡರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಾರೆಂಬ ಕಾರಣಕ್ಕಾಗಿ 2014ರಲ್ಲಿ ಗೋವಾ ಸರಕಾರವು ಪ್ರಮೋದ್ ಮುತಾಲಿಕ್‌ಗೆ ಗೋವಾ ಪ್ರವೇಶವನ್ನು ನಿಷೇಧಿಸಿತ್ತು.
ಮುಂಬೈ ಹೈಕೋರ್ಟ್‌ನ ಗೋವಾ ನ್ಯಾಯ ಪೀಠ ಈ ಆದೇಶವನ್ನು ಎತ್ತಿ ಹಿಡಿದಿತ್ತು. 2009ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಪಬ್ ದಾಳಿ ಪ್ರಕರಣದಲ್ಲಿ ಮುತಾಲಿಕ್ ವಿರುದ್ಧ ಆರೋಪ ದಾಖಲಾಗಿದೆ.







