ಅಮೃತಸರ ಗಿನ್ನಿಸ್‌ದಾಖಲೆಗೆ ಸೇರ್ಪಡೆ
ಅಮೃತಸರ: ಮಾದಕ ವ್ಯಸನದ ಬಗೆಗಿನ ಸಂದೇಶವನ್ನು ಸಾರಲು 2016ರ ಅಕ್ಟೋಬರ್‌ನಲ್ಲಿ ಇಲ್ಲಿನ 40 ಶಾಲೆಗಳ 8,726 ಮಕ್ಕಳು ನಡೆಸಿದ ಅಪೂರ್ವ ನೃತ್ಯ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಿನ್ನಿಸ್ ದಾಖಲೆ ಸಂಸ್ಥೆಯ ವ್ಯವಸ್ಥಾಪನಾ ಮಂಡಳಿಯಿಂದ ಪ್ರಮಾಣಪತ್ರ ಸ್ವೀಕರಿಸಿದೆ. ಅಮೃತಸರದ ಖಾಲ್ಸಾ ಕಾಲೇಜಿನಲ್ಲಿ ನಡೆದ ಈ ನೃತ್ಯ ಪ್ರದರ್ಶನ ಇದುವರೆಗಿನ ಅತಿದೊಡ್ಡ ಬಾಲಿವುಡ್ ಡ್ಯಾನ್ಸ್ ಆಗಿ ದಾಖಲೆಗೆ ಸೇರ್ಪಡೆಯಾಗಿದೆ ಎಂದು ಜಿಲ್ಲಾಧಿಕಾರಿ ರವಿ ಭಗತ್ ಸುದ್ದಿಗಾರರಿಗೆ ತಿಳಿಸಿದರು.
Next Story





