ಸನಾವುಲ್ಲಾ ನವಿಲೇಹಾಳ್‌ಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ
ಮಂಗಳೂರು, ಜ.15: ದಾವಣಗೆರೆಯ ಲೇಖಕ ಸನಾವುಲ್ಲಾ ನವಿಲೇಹಾಳ್‌ರವರ ‘ಒಂಟಿ ಮರದ ಕೆಳಗೆ’ ಕವನ ಸಂಕಲನವು 2014ನೆ ಸಾಲಿನ ರಾಜ್ಯ ಮಟ್ಟದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಕನ್ನಡದಲ್ಲಿ ಪ್ರಕಟಿತ ಅತ್ಯುತ್ತಮ ಕೃತಿಗೆ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ನೀಡುತ್ತಿರುವ ಈ ಪ್ರಶಸ್ತಿಯು 10,000 ರೂ. ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಸನಾವುಲ್ಲ, ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ. ಈ ಚೊಚ್ಚಲ ಕೃತಿಗೆ 2014ನೆ ಸಾಲಿನ ಕನ್ನಡ ಪುಸ್ತಕ ಪ್ರಾಕಾರದ ಪ್ರೋತ್ಸಾಹ, ಕೂಡಲ ಸಂಗಮದ ಮಂಗಳ ಸಾಹಿತ್ಯ ವೇದಿಕೆಯ ಚುಟುಕು ಮಂದಾರ ಪ್ರಶಸ್ತಿ ಹಾಗೂ ಬೆಂಗಳೂರಿನ ರಂಗಶ್ರೀ ಕಲಾ ಸಂಸ್ಥೆಯ ಕಾವ್ಯ ಸೌರಭ ಪ್ರಶಸ್ತಿಗಳನ್ನು ಪಡೆದಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಜ.29ರಂದು ಸಂಜೆ 6:45ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





