ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿ ಮೋರಿ ಸೇರಿದ ಡಸ್ಟರ್ ಕಾರು!

ಉಳ್ಳಾಲ, ಜ.16: ಡಸ್ಟರ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಿರ್ಮಾಣ ಹಂತದಲ್ಲಿರುವ ಮೋರಿಗೆ ಬಿದ್ದು ಜಖಂಗೊಂಡ ಘಟನೆ ಉಳ್ಳಾಲ ಬೈಲಿನಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕ ಕೇರಳ ಮೂಲದ ಹೆಲ್ಫಿನ್(34) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳ್ಳಾಲ ಮುಖ್ಯ ರಸ್ತೆಯ ವಿಸ್ತರಣಾ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದರಿಂದ ಅಲ್ಲಲ್ಲಿ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಇದೇ ಕಾರಣದಿಂದ ನಿನ್ನೆ ರಾತ್ರಿ ರಸ್ತೆ ವಿಭಜಕವನ್ನು ಅಂದಾಜಿಸುವಲ್ಲಿ ಕಾರು ಚಾಲಕ ವಿಫಲರಾದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
Next Story





