Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಬ್ರಾಹ್ಮಣರು ಮತ್ತು ದಲಿತರು ಒಂದಾಗುವುದು...

ಬ್ರಾಹ್ಮಣರು ಮತ್ತು ದಲಿತರು ಒಂದಾಗುವುದು ಪ್ರಗತಿಪರರಿಗೆ ಇಷ್ಟವಿಲ್ಲ: ಕನ್ನಡಪ್ರಭ ಸಂದರ್ಶನದಲ್ಲಿ ಪೇಜಾವರಶ್ರೀ

ವಾರ್ತಾಭಾರತಿವಾರ್ತಾಭಾರತಿ16 Jan 2016 10:11 AM IST
share
ಬ್ರಾಹ್ಮಣರು ಮತ್ತು ದಲಿತರು ಒಂದಾಗುವುದು ಪ್ರಗತಿಪರರಿಗೆ ಇಷ್ಟವಿಲ್ಲ: ಕನ್ನಡಪ್ರಭ ಸಂದರ್ಶನದಲ್ಲಿ ಪೇಜಾವರಶ್ರೀ

ಮಂಗಳೂರು, ಜ.16: ಬ್ರಾಹ್ಮಣರು ಮತ್ತು ದಲಿತರು ಒಂದಾಗುವುದು ಪ್ರಗತಿಪರರಿಗೆ ಇಷ್ಟವಿಲ್ಲ. ಹಿಂದೂ ಧರ್ಮವು ಒಗ್ಗಟ್ಟಾಗುವುದು ಅವರಿಗೆ ಇಷ್ಟವಿಲ್ಲ. ಹಿಂದೂ ಸಮಾಜವು ಯಾವಾಗಲು ಕಚ್ಚಾಡುತ್ತಲೇ ಇರಬೇಕು. ಒಂದಾಗಬಾರದು ಎಂಬುದೇ ಅವರ ಇಷ್ಟ ಎಂದು ಸೋಮವಾರ ಉಡುಪಿ ಶ್ರೀಕೃಷ್ಣ ಮಠದಲ್ಲಿ ದಾಖಲೆಯ ಐದನೆಯ ಬಾರಿ ಪರ್ಯಾಯ ಪೀಠವನ್ನೇರಲಿರುವ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಕನ್ನಡಪ್ರಭ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ನಾವು ಎಲ್ಲಾ ಹಿಂದೂಗಳನ್ನು ಒಟ್ಟುಗೂಡಿಸುತ್ತಿದ್ದೇವೆ. ದಲಿತರಿಗೆ ಹೆಚ್ಚು ಗೌರವ ತೋರುತ್ತಿದ್ದೇವೆ. ಇದರಿಂದ ಹಿಂದುತ್ವ ಬಲಗೊಳ್ಳುತ್ತಿದೆ. ಆದರೆ ಪ್ರಗತಿಪರರಿಗೆ ಇಷ್ಟ ಇಲ್ಲ, ಹಿಂದೂತ್ವ ಅಂದರೆ ಬ್ರಾಹ್ಮಣಿಸಂ ಎನ್ನುವ ಭ್ರಾಂತಿ ಇವರಲ್ಲಿದೆ. ಬ್ರಾಹ್ಮಣ ಪೀಠಗಳು ಬಲಗೊಳ್ಳುತ್ತಿವೆ. ಹಿಂದುತ್ವದ ಶಕ್ತಿ ಹೆಚ್ಚುತ್ತಿದೆ ಎನ್ನುವ ಭಯ ಇದೆ. ಆದುದರಿಂದ ಅವರೆಲ್ಲ ಸದಾ ತನ್ನನ್ನೇ ಟಾರ್ಗೆಟ್ ಮಾಡುತ್ತಿರುತ್ತಾರೆ ಎಂದು ಪೇಜಾವರಶ್ರೀ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿನ ಪಂಕ್ತಿಭೇದ ಕುರಿತಂತೆ ಮಾತನಾಡಿದ ಸ್ವಾಮೀಜಿ, ಶ್ರೀಕೃಷ್ಣ ಮಠದಲ್ಲಿ ಸಹಪಂಕ್ತಿ ಭೋಜನ ಮತ್ತು ಸಾಂಪ್ರದಾಯಿಕ ಭೋಜನ ಎಂದಿದೆ. ಆದರೆ ಅದು ಪಂಕ್ತಿಭೇದವಲ್ಲ. ಮಠಕ್ಕೆ ಯಾರೇ ಊಟಕ್ಕೆ ಬಂದರೂ ಒಟ್ಟಿಗೆ ಕುಳಿತು ಸಹಭೋಜನಕ್ಕೆ ಅವಕಾಶವಿದೆ. ನಿತ್ಯ ಸಾವಿರಾರು ಜನರು ಊಟ ಮಾಡುತ್ತಿದ್ದಾರೆ. ಅದರಲ್ಲಿ ಜಾತಿ, ಭೇದವಿಲ್ಲ. ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆದರೆ ಸಾಂಪ್ರದಾಯಿಕ ಭೋಜನದ ಬಗ್ಗೆ ಕೆಲವರು ಆಕ್ಷೇಪಿಸುತ್ತಿದ್ದಾರೆ. ಕೆಲವರು ಮಾಂಸಾಹಾರ ಮಾಡುವವರ ಜೊತೆಗೆ ಕುಳಿತು ಊಟ ಮಾಡುವುದಿಲ್ಲ ಎಂಬಿತ್ಯಾದಿ ನಿಯಮಗಳನ್ನು ಪಾಲಿಸುತ್ತಾರೆ. ಅಂತಹವರು ಊಟಕ್ಕೆ ಬಂದಾಗ ಅವರಿಗೂ ಊಟ ಹಾಕಲೇಬೇಕು, ಅವರಿಗೆ ಚೌಕಿಯಲ್ಲಿ ಊಟ ಹಾಕುತ್ತೇವೆ. ಅದನ್ನೇ ಪಂಕ್ತಿಭೇದ ಎಂದು ಆರೋಪಿಸುವುದು ಸರಿಯಲ್ಲ ಅವರು ಅಭಿಪ್ರಾಯಿಸಿದ್ದಾರೆ.
ದಲಿತರ ಬಗ್ಗೆ ಕಾಳಜಿ ಹೊಂದಿರುವ ಪೇಜಾವರಶ್ರೀ ತನ್ನ ಉತ್ತರಾಧಿಕಾರಿಯಾಗಿ ದಲಿತರೊಬ್ಬರನ್ನು ಸ್ವೀಕರಿಸುವಂತೆ ಪ್ರಗತಿಪರರ ಸವಾಲಿನ ಕುರಿತಂತೆ ಪ್ರತಿಕ್ರಿಯಿಸಿರುವ ಸ್ವಾಮೀಜಿ, ‘‘ನಮ್ಮ ಮಠಕ್ಕೆ ಮಾತ್ರ ಯಾಕೆ ಈ ಸವಾಲು? ಯಾವ ಮಠಗಳು ತಮ್ಮ ಜಾತಿಯವರನ್ನು ಬಿಟ್ಟು ಬೇರೆ ಜಾತಿಯವರನ್ನು ಉತ್ತರಾಧಿಕಾರಿಯಾಗಿ ನೇಮಿಸಿವೆ? ರಾಜ್ಯದಲ್ಲಿ ನೂರಾರು ವೀರಶೈವ ಮಠಗಳಿವೆ, ಒಕ್ಕಲಿಗ ಮಠಗಳಿವೆ, ಬೇರೆ ಬ್ರಾಹ್ಮಣ ಮಠಗಳಿವೆ. ಎಲ್ಲಾ ಮಠಗಳು ತಂತಮ್ಮ ಜಾತಿಯವರನ್ನೇ ಉತ್ತರಾಧಿಕಾರಿಯಾಗಿ ನೇಮಿಸುತ್ತಿದ್ದಾರೆ. ಹಾಗಿರುವಾಗ ನಾವು ಬ್ರಾಹ್ಮಣೇತರರೊಬ್ಬರನ್ನು ಉತ್ತರಾಧಿಕಾರಿಯಾಗಿ ನೇಮಿಸಬೇಕು ಎಂದು ಒತ್ತಾಯಿಸುವುದು ಹೇಳುವುದು ಎಷ್ಟು ಸರಿ? ಇದೇ ಒತ್ತಾಯವನ್ನು ರಾಜ್ಯದ ಬೇರೆ ಮಠಗಳಿಗೆ ಯಾಕೆ ಮಾಡುವುದಿಲ್ಲ’’ ಎಂದು ಪ್ರಗತಿಪರರ ರನ್ನು ಮರುಪ್ರಶ್ನಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X