ಹೊಸ್ಮಠ ಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕ ಅಂಗಾರ

ಕಡಬ, ಜ.16: ನೂತನವಾಗಿ ನಿರ್ಮಾಣವಾಗುತ್ತಿರುವ ಹೊಸ್ಮಠ ಸೇತುವೆಯನ್ನು ಸುಳ್ಯ ಶಾಸಕರಾದ ಎಸ್.ಅಂಗಾರರವರು ಶನಿವಾರದಂದು ವೀಕ್ಷಿಸಿ ಕಾಮಗಾರಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಎಪಿಎಂಸಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕಡಬ, ಪುತ್ತೂರು ತಾಲೂಕು ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಪುಲಸ್ತ್ಯಾ ರೈ, ಕುಟ್ರುಪ್ಪಾಡಿ ಪಂಚಾಯತ್ ಅದ್ಯಕ್ಷರಾದ ಜಾನಕಿ, ಕಾಂಟ್ರಾಕ್ಟರರಾದ ಲೋಫ್ ಕನ್ ಸ್ಟ್ರಕ್ಷನ್ ದಾರರಾದ ಹಾಜಿ ಮುಹಮ್ಮದ್ ಕುಂಞಿ, ನಿಝಾಮುದ್ದೀನ್ ಪ್ರಮುಖರಾದ ಕುಟ್ರುಪ್ಪಾಡಿ ಪಂಚಾಯತ್ ಸದಸ್ಯ ಕೃಷ್ಣಪ್ಪ ದೇವಾಡಿಗ, ಮೋನಪ್ಪ ಗೌಡ ನಾಡೋಳಿ ಮೊದಲಾದವರು ಉಪಸ್ಥಿತರಿದ್ದರು.
Next Story





