ಪೊಲೀಸ್ ಕ್ವಾರ್ಟರ್ಸ್ ಮೇಲೆ ಬಾಂಬ್ ದಾಳಿ
ಪೊಲೀಸರ ಮೇಲೆ ದಾಳಿ ನಡೆಸುವವರನ್ನು ಗುಂಡಿಟ್ಟು ಕೊಲ್ಲಲಾಗುವುದು: ಡಿಐಜಿ
ಕಣ್ಣೂರು, ಕೇರಳ: ಎಸ್‌ಐ ಹಾಗೂ ಸಿಐಗಳು ವಾಸಿಸುವ ಪೊಲೀಸ್ ಕ್ವಾರ್ಟರ್ಸ್‌ಗೆ ದುಷ್ಕರ್ಮಿಗಳು ಬಾಂಬ್ ದಾಳಿ ನಡೆಸಿದ ಘಟನೆ ಪಯನ್ನೂರ್ ಪೊಲೀಸ್ ಠಾಣೆ ಸಮೀಪದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕ್ವಾರ್ಟರ್ಸ್ ಗುರಿಯಾಗಿರಿಸಿ ಎರಡು ಸ್ಟೀಲ್ ಬಾಂಬ್‌ಗಳನ್ನು ಎಸೆಯಲಾಗಿದ್ದು, ಮೇಲಿನ ಅಂತಸ್ತಿನ ಸಿಟೌಟ್‌ನ ಗೋಡೆಗೆ ಬಡಿದ ಬಾಂಬ್ ಕೆಳಗ್ಗೆ ಬಿದ್ದು ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.
ಮೇಲಿನ ಅಂತಸ್ತಿನ ಕಿಟಕಿಯ ಗಾಜುಗಳು ಪುಡಿಯಾಗಿದ್ದು, ಕೆಳಗಿನ ಅಂತಸ್ತಿನ ಪ್ರವೇಶ ದ್ವಾರದ ಬಾಗಿಲಿನ ಕೆಳಭಾಗ ಹಾನಿಗೀಡಾಗಿದೆ.
ಡಿವೈಎಫ್‌ಐನ ಸ್ಥಳೀಯ ಮುಖಂಡನ ಬಂಧನಕ್ಕೆ ಪ್ರತಿಕಾರವಾಗಿ ಬಾಂಬ್ ದಾಳಿ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಡಿಐಜಿ ದಿನೇಂದ್ರ ಕಶ್ಯಪ್, ಪೊಲೀಸರ ಮೇಲೆ ದಾಳಿ ಮಾಡುವವರನ್ನು ಗುಂಡಿಟ್ಟು ಕೊಲ್ಲಲಾಗುವುದು ಎಂದು ಎಚ್ಚರಿಸಿದ್ದಾರೆ.
Next Story





