ಕಿನ್ನಿಗೋಳಿ : ಕಾಂಕ್ರಿಟ್ ರಸ್ತೆಗಳ ಉದ್ಘಾಟನೆ

ಕಿನ್ನಿಗೋಳಿ, ಜ.16: ಕೆಮ್ರಾಲ್ ಮತ್ತು ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 35 ಲಕ್ಷ ರೂ. ವೆಚ್ಚದ ಹಲವು ನೂತನ ಕಾಂಕ್ರಿಟ್ ರಸ್ತೆಗಳನ್ನು ಮುಲ್ಕಿ-ಮೂಡಬಿದಿರೆ ಕ್ಷೇತ್ರ ಶಾಸಕ, ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಅಭಯ ಚಂದ್ರ ಜೈನ್ ಶನಿವಾರ ಉದ್ಘಾಟಿಸಿದರು.
ಶಾಸಕರ ನಿಧಿಯಿಂದ 17 ಲಕ್ಷ ರೂ. ವೆಚ್ಚದ ಕೆಮ್ರಾಲ್ ಬೊಳ್ಳೂರು ಕೊಡ್ದಬ್ಬು ದೈವಸ್ಥಾನ ರಸ್ತೆ , 5 ಲಕ್ಷ ರೂ. ವೆಚ್ಚದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತ ಜೂದರ ಶಾಲೆಯ ರಸ್ತೆ, 5. ಲಕ್ಷ ರೂ. ವೆಚ್ಚದ ಕೆಮ್ರಾಲ್ ಕೊಯ್ಕುಡೆ _ ಬೊಳ್ಳೂರು ರಸ್ತೆ, ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 10ನೆ ತೋಕೂರು ತಾಳಿಗುರಿ ರಸ್ತೆ, ತಾಲೂಕು ಪಂಚಾಯತ್ ಹಾಗೂ ಶಾಸಕರ ನಿಧಿಯ 3.15 ಲಕ್ಷ ರೂ. ವೆಚ್ಚದ ಪಕ್ಷಿಕೆರೆ ಎಸ್‌ಸಿ ಕಾಲನಿ ಸಂಪರ್ಕ ರಸ್ತೆಗಳು ಇಂದು ಉದ್ಘಾಟನೆ ಗೊಂಡವು.
ನೂತನ ಕಾಂಕ್ರಿಟ್ ರಸ್ತೆಗಳನ್ನು ಉದ್ಘಾಟಿಸಿ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದ ಸಚಿವ ಅಭಯ ಚಂದ್ರ ಜೈನ್, ಗ್ರಾಮೀಣ ಭಾಗದ ಎಲ್ಲಾ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳಾಗಿ ಮಾಡುವ ಗುರಿ ಹೊಂದಿರು ಸಿದ್ದಾರಮಯ್ಯ ನೇತೃತ್ವದ ಸರಕಾರ ಜನರ ಬೇಡಿಕೆಗಳಿಗೆ ಸ್ಪಂದಿಸುವ ಸಲುವಾಗಿ ನಿಧಿಗಳನ್ನು ಕಲ್ಪಿಸುವ ಮೂಲಕ ಕಾಮಗಾರಿಗಳನ್ನು ಶೀಘ್ರ ನಡೆಸುತ್ತಿದೆ. ಎಲ್ಲಾ ರಸ್ತೆಗಳು ಉತ್ತಮ ಗುಣ ಮಟ್ಟದ್ದಾಗಿದ್ದು, ಕನಿಷ್ಠ 25 ವರ್ಷ ಬಾಳಿಕೆ ಬರಳಿವೆ ಎಂದರು.
ಈ ಸಂದರ್ಭ ಪಕ್ಷಿಕೆರ ಸೆಂಟ್ ಜೂದರ ಚರ್ಚ್‌ನ ಧರ್ಮಗುರು ಆಂಡ್ರೋ ಲಿಯೋ ಡಿಸೋಜಾ, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ದಾಸ್, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಅಂಚನ್, ಮಾಜೀ ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ತಾಲೂಕು ಪಂಚಾಯತ್ ಸದಸ್ಯೆ ಬೇಬಿ ಕೋಟ್ಯಾನ್, ಸಾವಿತ್ರ ಸುವರ್ಣ, ಪಂಚಾಯತ್ ಸದಸ್ಯರಾದ ಮಯ್ಯದ್ದಿ ಪಕ್ಷಿಕೆರೆ, ಸುರೇಶ್ ಪಂಜ, ವಾಹಿದ್ ಸಾಹೇಬ್, ತಾಲೂಕು ಪಂಚಾಯತ್ ಮಾಜೀ ಸದಸ್ಯೆ ಶೈಲಾ ಸಿಕ್ವೇರಾ, ತಾಲೂಕು ಪಂಚಾಯತ್ ಸದಸ್ಯ ರಾಜು ಕುಂದರ್, ಕಿರಣ್ ಬೊಳ್ಳೂರು, ದಯಾನಂದ ಶೆಟ್ಟಿಗಾರ್, ಮೊದಲಾದವರು ಉಪಸ್ಥಿತರಿದ್ದರು.







