ಕಾಸರಗೋಡು : ಪಲ್ಸ್ ಪೋಲಿಯೋ ರೋಗ ಪ್ರತಿರೋಧ ಔಷಧಿ ವಿತರಣಾ ಕಾರ್ಯಕ್ರಮ

ಕಾಸರಗೋಡು : ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ರೋಗ ಪ್ರತಿರೋಧ ಔಷಧಿ ವಿತರಣಾ ಕಾರ್ಯಕ್ರಮ ನಾಳೆ ( ೧೭) ನಡೆಯಲಿದ್ದು , ಸಿದ್ದತೆ ಪೂರ್ಣಗೊಂಡಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ . ಎಚ್ . ದಿನೇಶ್ ಕುಮಾರ್ ತಿಳಿಸಿದ್ದಾರೆ.
ಇದಕ್ಕಾಗಿ ಜಿಲ್ಲೆಯಲ್ಲಿ ೧೧೯೭ ಕೇಂದ್ರಗಳನ್ನು ತೆರೆಯಲಾಗಿದೆ. ಐದು ವರ್ಷ ಕೆಳಗಿನ ೧, ೨೦,೭೩೪ ಮಕ್ಕಳಿಗೆ ನಾಳೆ ಬೆಳಿಗ್ಗೆ ೮ ರಿಂದ ಸಂಜೆ ೫ ರ ತನಕ ಔಷಧಿ ವಿತರಿಸಲಾಗುವುದು. ೨೭೯೪ ಸ್ವಯಂ ಸೇವಕರು , ೧೭೭ ಮೇಲ್ವಿಚಾರಕರ ಸೇವೆಯನ್ನು ಇದಕ್ಕಾಗಿ ಬಳಸಲಾಗುವುದು. ಜಿಲ್ಲೆಯ ೪೪ ಪ್ರಾಥಮಿಕ ಆರೋಗ್ಯ ಕೇಂದ್ರ , ಎಂಟು ಸಮುದಾಯ ಆರೋಗ್ಯ ಕೇಂದ್ರ , ಎರಡು ತಾಲೂಕು ಆಸ್ಪತ್ರೆ , ಜಿಲ್ಲಾ ಜನರಲ್ ಆಸ್ಪತ್ರೆಗಳಲ್ಲೂ ಇದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಅನ್ಯ ರಾಜ್ಯದಿಂದ ಜಿಲ್ಲೆಯಲ್ಲಿ ಬಂದು ವಾಸಿಸುವ ಕಾರ್ಮಿಕರ ಮಕ್ಕಳಿಗೆ ಔಷಧಿ ವಿತರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ೧೮ ರಿಂದ ೨೦ ರ ತನಕ ತರಬೇತಿ ಲಭಿಸಿದ ಸ್ವಯಂ ಸೇವಕರು ಮನೆ ಮನೆ ಗಳಿಗೆ ತಲುಪಿ ಪೋಲಿಯೋ ಔಷಧಿ ಲಭಿಸಿದೆಯೇ ಎಂಬ ಬಗ್ಗೆ ಖಚಿತಪಡಿಸುವರು.
ಸುದ್ದಿಗೋಷ್ಠಿಯಲ್ಲಿ ಎ ಡಿ ಎಂ ಎಚ್ . ದಿನೇಶನ್, ಡಾ . ಕೆ . ನಾರಾಯಣ ನಾಯಕ್ , ಡಾ . ಮುರಳೀಧರ ನಲೂರಾಯ , ಎಂ . ರಾಮಚಂದ್ರ , ಡಾ. ವಿಮಲ್ ರಾಜ್ ಮೊದಲಾದವರು ಉಪಸ್ಥಿತರಿದ್ದರು .





