ಬೆಳ್ತಂಗಡಿ : ಗ್ರಾಮ ವಿಕಾಸ ಯೋಜನೆಯಡಿ ಮಂಜೂರಾದ 75 ಲಕ್ಷ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ

ಬೆಳ್ತಂಗಡಿ : ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮಕ್ಕೆ ಸರಕಾರದ ಗ್ರಾಮ ವಿಕಾಸ ಯೋಜನೆಯಡಿ ಮಂಜೂರಾದ 75 ಲಕ್ಷ ರೂ.ಗಳ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ. ವಸಂತ ಬಂಗೇರ ಶನಿವಾರ ಚಾಲನೆ ನೀಡಿದರು
ಸಭೆಯನ್ನು ಉ್ದೇಶಿಸಿಮಾತನಾಡಿದ ಬಂಗೇರ ಅವರು ಈ ಭಾಗದ ಜನರಿಗೆಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ. ಅಲ್ಲದೆ ಈಗಾಗಲೇ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಇದಕ್ಕೆ ತಕ್ಷಣ ಸ್ಪಂದಿಸಿ ಒಂದು ಬೋರ್‌ವೆಲ್ ತೆಗೆಸಲಾಗಿದ್ದು ಇದರಲ್ಲಿ ನೀರು ಸಿಗದೆ ಇರುವುದರಿಂದ ಇನ್ನೊಂದು ಬೋರ್‌ವೆಲ್ ತೆಗೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಬಳಂಜ ಗ್ರಾ. ಪಂ. ಅಧ್ಯಕ್ಷೆ ದೇವಕಿ, ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಸದಸ್ಯರುಗಳಾದ ಪಿ. ಕೆ. ಚಂದ್ರಶೇಖರ್, ಶೋಭಾ ಕುಲಾಲ್, ಮಂಜುಳ, ಗುರುರಾಜ ಹೆಗ್ಡೆ, ತಾ. ಪಂ. ಸದಸ್ಯ ಹೆಚ್. ಧರ್ಣಪ್ಪ ಪೂಜಾರಿ, ಗ್ರಾ. ಪಂ. ಮಾಜಿ ಅಧ್ಯಕ್ಷರುಗಳಾದ ವಿಕ್ಟರ್ ಕ್ರಾಸ್ತ, ಸುರೇಶ್ ಶೆಟ್ಟಿ ಕುರೇಲ್ಯ, ಆಶಾ, ಕೆ.ಡಿ.ಪಿ ಸದಸ್ಯಶೇಖರ ಕುಕ್ಕೇಡಿ, ರಮನಾಥ ಶೆಟ್ಟಿ ಪಂಬಾಜೆ, ಬಿ. ಕೆ. ವಸಂತ್, ಪ್ರಮೋದ್ ಕುಮಾರ್ ನಾಲ್ಕೂರು, ತಿಮ್ಮಪ್ಪ ಪೂಜಾರಿ ನಿಟ್ಟಡ್ಕ, ಗಿರೀಶ್ ಬಂಗೇರ ನಾಲ್ಕೂರು, ಬಾಲಕೃಷ್ಣ ಶೆಟ್ಟಿ ಕುರೇಲ್ಯ, ದಿನೇಶ್ ಪಿ.ಕೆ. ಬಳಂಜ, ಹರೀಶ್ ವೈ ಚಂದ್ರಮ, ಸುರೇಶ್ ಪೂಜಾರಿ ಜೈಮಾತ ಮುಂತಾದವರು ಉಪಸ್ಥಿತರಿದ್ದರು.







