ಸಾರಣೆ ಕಾರ್ಮಿಕ ನೇಣಿಗೆ ಶರಣು.

ಮಂಜೇಶ್ವರ : ಸಾರಣೆ ಕೆಲಸದ ಯುವಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಸಂಜೆ ಕಂಡುಬಂದಿದೆ.
ಬೆದ್ರಂಪಳ್ಳ ಬಳಿಯ ನಾರಾಯಣ ನಾಯ್ಕರ ಪುತ್ರ ವಿನೋದಾ(22)ನೇಣಿಗೆ ಶರಣಾದ ಯುವಕನಾಗಿದ್ದು,ಘಟನೆಯ ಬಗ್ಗೆ ವ್ಯಾಪಕ ಸಂಶಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಉನ್ನತ ಮಹಜರಿಗೆ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದು ಪರಿಶೀಲನೆ ನಡೆಸಲಾಯಿತು.ಶುಕ್ರವಾರ ಬೆಳಿಗ್ಗೆ ನಡುಬೈಲು ಎಂಬಲ್ಲಿ ಸಾರಣೆ ಕೆಲಸ ನಿರ್ವಹಿಸುತ್ತಿದ್ದ ಈತ ಮಧ್ಯಾಹ್ನ ವೇಳೆ ಹೊಟ್ಟೆನೋವೆಂದು ಸಹ ಕಾರ್ಮಿಕರಲ್ಲಿ ತಿಳಿಸಿ ತೆರಳಿದ್ದ.ಬಳಿಕ ಹಿಂತಿರುಗಿರಲಿಲ್ಲ.ಈ ನಡುವೆ ನಡುಬೈಲಿನ ರಸ್ತೆ ಬದಿಯ ಮರವೊಂದರಲ್ಲಿ ಸಂಜೆ ವೇಳೆ ವಿನೋದನ ಮೃತದೇಹ ಕಂಡುಬಂತು.ಬದಿಯಡ್ಕ ಪೋಲೀಸರು ಮಹಜರು ನಡೆಸಿದರು.ಈತನ ಸಾವಿನ ಬಗ್ಗೆ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉನ್ನತ ಪರೀಕ್ಷೆಗೆ ಮೃತದೇಹವನ್ನು ಪರಿಯಾರಂಗೆ ಕೊಂಡೊಯ್ಯಲಾಯಿತು.ಮೃತನು ತಾಯಿ,ಇಬ್ಬರು ಸಹೋದರರನ್ನು ಅಗಲಿದ್ದಾನೆ.
Next Story





