ಮಂಜೇಶ್ವರ : ಸಮಸ್ತ 90 ನೇ ವಾರ್ಷಿಕ ಸಮ್ಮೇಳನ

ಕೋಟ್ಟುಮಲ ಬಾಪ್ಪು ಮುಸ್ಲಿಯಾರ್ ನೇತೃತ್ವದ ಸಮಸ್ತ ಸಂದೇಶ ಯಾತ್ರೆಗೆ ಹೊಸಂಗಡಿಯಲ್ಲಿ ಭವ್ಯ ಸ್ವಾಗತ
ಮಂಜೇಶ್ವರ : ಸಮಸ್ತ 90 ನೇ ವಾರ್ಷಿಕ ಸಮ್ಮೇಳನದ ಪ್ರಚಾರಾರ್ಥ ಕೋಟ್ಟು ಮಲ ಬಾಪ್ಪು ಮುಸ್ಲಿಯಾರ್ ನಾಯಕತ್ವದ ಸಮಸ್ತ ಸಂದೇಶ ಯಾತ್ರೆಗೆ ಹೊಸಂಗಡಿಯಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಪಚ್ಯಿುಕ್ಕಿ ಉಸ್ತಾದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಯು.ಎಂ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಉದ್ಗಾಟಿಸಿದರು. ನಾಸಿರ್ ಫೈಝಿ ಕೂಡತ್ತಾಯಿ ಮುಖ್ಯ ಭಾಷಣ ಮಾಡಿದರು. ಜಾಥಾ ನಾಯಕ ಕೋಟ್ಟುಮಲ ಬಾಪ್ಪು ಮುಸ್ಲಿಯಾರ್ ,
ಕೋಝಿಕ್ಕೋಡು ಖಾಝಿ ಮುಹಮ್ಮದ್ ಜಮಲುಲ್ಲೈಲಿ ತಂಘಳ್ , ಕೊಡಗು ಅಬ್ದುಲ್ ರಹಿಮಾ ಮುಸ್ಲಿಯಾರ್ , ಎಂ.ಎ ಖಾಸಿಂ ಮುಸ್ಲಿಯಾರ್ , ಕಯ್ಯೋಡ್ ಉಮ್ಮರ್ ಮುಸ್ಲಿಯಾರ್ , ಮುಕ್ಕಂ ಉಮ್ಮರ್ ಫೈಝಿ , ಮುಸ್ತಫಾ ಅಶ್ರಫಿ ಕಕ್ಕುಪ್ಪಡಿ , ಖತಾರ್ ಇಬ್ರಾಹಿಮ ಹಾಜಿ, ಹರ್ಷಾದ್ ವರ್ಕಾಡಿ, ಎ.ಕೆ.ಎಂ ಅಶ್ರಫ್ ಮೊದಲಾದವರು ಉಪಸ್ತಿತರಿದ್ದರು. ಕಜೆ ಅಬ್ದುಲ್ಲ ಫೈಝಿ ಸ್ವಾಗತಿಸಿದರು.


Next Story







