Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಲಾಸ್ಟ್ ಬಸ್: ಸೈಕಾಲಾಜಿಕಲ್ ಥ್ರಿಲ್ಲರ್

ಲಾಸ್ಟ್ ಬಸ್: ಸೈಕಾಲಾಜಿಕಲ್ ಥ್ರಿಲ್ಲರ್

ಮುಸಾಫಿರ್ಮುಸಾಫಿರ್16 Jan 2016 10:54 PM IST
share
ಲಾಸ್ಟ್ ಬಸ್: ಸೈಕಾಲಾಜಿಕಲ್ ಥ್ರಿಲ್ಲರ್

ಮನಸ್ಸು, ಭಯ ಮತ್ತು ವೌಢ್ಯ ಇವು ಮೂರನ್ನು ಇಟ್ಟುಕೊಂಡು ‘ಲಾಸ್ಟ್ ಬಸ್’ ಹತ್ತಿದ್ದಾರೆ ನಿರ್ದೇಶಕ ಅರವಿಂದ್ ನರಸಿಂಹರಾಜು. ಗಾಂಧಿನಗರದಲ್ಲಿ ಇದು ಇವರ ಪಾಲಿಗೆ ಲಾಸ್ಟ್ ಬಸ್ ಪಯಣವಾಗದೆ, ಅವರನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಪಯಣವಾಗುವುದರಲ್ಲಿ ಈ ಚಿತ್ರ ಖಂಡಿತ ಸಹಾಯ ಮಾಡಲಿದೆ. ಈ ಚಿತ್ರದಲ್ಲಿ ದೆವ್ವ ಇದೆ ಎಂದು ಎಲ್ಲೂ ಹೇಳಲಾಗುವುದಿಲ್ಲ. ಅಂತೆಯೇ ಮನಸ್ಸು ಮತ್ತು ಭಯದ ಪರಿಣಾಮಗಳೂ ಹೇಗೆ ನಮ್ಮನ್ನು ಕಂಗೆಡಿಸಬಹುದು ಎನ್ನುವುದನ್ನು ವಸ್ತುವಾಗಿಟ್ಟುಕೊಂಡು ಚಿತ್ರ ಮಾಡಿದ್ದಾರೆ. ಒಂದು ರೀತಿಯಲ್ಲಿ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ ಎನ್ನುವುದಕ್ಕೆ ಅಡ್ಡಿಯಿಲ್ಲ. ಬೇರೆ ಬೇರೆ ಕಾರಣಗಳಿಂದ, ಬೇರೆ ಬೇರೆ ದಾರಿಗಳಿಂದ ಬಂದ ವ್ಯಕ್ತಿಗಳು, ಜೋಡಿಗಳು ಹತ್ತಿದ ಲಾಸ್ಟ್ ಬಸ್ ದಾರಿ ತಪ್ಪಿ ಕಾಡಿನ ಮಧ್ಯೆ ಸಿಲುಕಿಕೊಳ್ಳುವ ಕತೆಯೇ ಲಾಸ್ಟ್ ಬಸ್. ಒಂದು ಪಾಳುಬಂಗಲೆಯಲ್ಲಿ ಕೆಲವು ಪ್ರಯಾಣಿಕರು ಪಡೆಯುವ ವಿಚಿತ್ರ, ನಿಗೂಢ ಅನುಭವಗಳು ಮತ್ತು ಅದರಿಂದ ಹೊರ ಬರಲು ಅವರು ನಡೆಸುವ ಪ್ರಯತ್ನವೇ ಈ ಚಿತ್ರದ ವಸ್ತು. ಇಡೀ ಚಿತ್ರವನ್ನು ಒಂದು ಅನುಭವವಾಗಿ ಕಟ್ಟಿಕೊಡುವುದು ಅನಂತ ಅರಸ್ ಅವರ ಅದ್ಭುತ ಛಾಯಾಗ್ರಹಣ. ದೃಶ್ಯಾನುಭವವೇ ಚಿತ್ರದ ನಿಜವಾದ ಹೀರೋ. ಅವಿನಾಶ್ ನರಸಿಂಹರಾಜು, ಮಾನಸ, ಮೇಘನಾಶ್ರೀ ಅವರ ನಟನೆ ಚಿತ್ರದ ನಡೆಗೆ ಪೂರಕವಾಗಿದೆ. ವಾಹಿನಿ ಮುಖ್ಯಸ್ಥರಾಗಿ ಪ್ರಕಾಶ್ ಬೆಳವಾಡಿ ಅವರದು ಹೇಳಿ ಮಾಡಿಸಿದ ಪಾತ್ರ. ದೀಪಾ, ಲೋಕೇಶ್, ಸಮರ್ಥ್ ಅವರ ಅಭಿನಯವೂ ಪರವಾಗಿಲ್ಲ. ಚಿತ್ರದ ಗತಿಗೆ ಪೂರಕವಾಗಿದೆ ಸ್ಟೀಫನ್ ಪ್ರಯೋಗ್‌ರ ಸಂಗೀತ. ಚಿತ್ರವನ್ನು ಬಿಗಿ ಕಳೆದುಕೊಳ್ಳದಂತೆ ನೋಡಿಕೊಳ್ಳುವಲ್ಲಿ ನಿರ್ದೇಶಕ ಅರವಿಂದ್ ಯಶಸ್ವಿಯಾಗಿದ್ದಾರೆ. ಒಂದೇ ಒಂದು ಹಾಡನ್ನು ಈ ಚಿತ್ರ ಒಳಗೊಂಡಿದೆ. ಆ ಹಾಡು ನಮ್ಮಾಳಗೆ ಚಿತ್ರರಂಗದಿಂದ ಹೊರ ಬಂದ ಬಳಿಕವೂ ಉಳಿದುಕೊಳ್ಳುತ್ತದೆ. ರಂಗಿತರಂಗದ ಯಶಸ್ಸಿನ ಬಳಿಕ ಕನ್ನಡ ಚಿತ್ರೋದ್ಯಮ ಬೇರೆ ಬೇರೆ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಅಭಿನಂದನಾರ್ಹವಾಗಿದೆ. ಸಿದ್ಧಸೂತ್ರಗಳನ್ನು ಹರಿದು, ಹೊಸತನಕ್ಕೆ ತುಡಿಯುವ ನಿರ್ದೇಶಕರಿದ್ದರೆ ಕನ್ನಡ ಯಾವ ಡಬ್ಬಿಂಗ್‌ಗೂ ಹೆದರಬೇಕಾಗಿಲ್ಲ. ರಂಗಿತರಂಗ ವಿಭಿನ್ನವಾಗಿ ಮೂಡಿ ಬಂದು ಬಾಹುಬಲಿಯಂತಹ ಅದ್ದೂರಿ ಚಿತ್ರಕ್ಕೆ ಸೆಡ್ಡು ಹೊಡೆದಿರುವುದು ಉದಾಹರಣೆಯಾಗಿ ನಮ್ಮ ಮುಂದಿದೆ. ಲಾಸ್ಟ್ ಬಸ್ ಕೂಡ ಅದೇ ರೀತಿಯ ಭರವಸೆಯನ್ನು ನಮ್ಮಲ್ಲಿ ಹುಟ್ಟಿಸುತ್ತದೆ.

share
ಮುಸಾಫಿರ್
ಮುಸಾಫಿರ್
Next Story
X