Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮಾಯವಾದ ಮಕರ ಸಂಕ್ರಾಂತಿ ಸಂಭ್ರಮ

ಮಾಯವಾದ ಮಕರ ಸಂಕ್ರಾಂತಿ ಸಂಭ್ರಮ

ಪತ್ರಕರ್ತಪತ್ರಕರ್ತ16 Jan 2016 11:04 PM IST
share
ಮಾಯವಾದ ಮಕರ ಸಂಕ್ರಾಂತಿ ಸಂಭ್ರಮ


ಮಕರಸಂಕ್ರಾಂತಿಯನ್ನು ಬಿಹಾರದಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇದು ಮೊಸರು, ಅವಲಕ್ಕಿ, ಬೆಲ್ಲ ಮತ್ತಿತರ ವೈವಿಧ್ಯಮಯ ಖಾದ್ಯಗಳನ್ನು ಮೆಲ್ಲುವ ಕ್ಷಣ. ದಿಲ್ಲಿಯಲ್ಲಿರುವ ಬಿಹಾರ ರಾಜಕಾರಣಿಗಳು ಪತ್ರಕರ್ತರನ್ನು ಆಹ್ವಾನಿಸಿ, ಬಿಹಾರದ ವೈವಿಧ್ಯಮಯ ಖಾದ್ಯಗಳ ಮೂಲಕ ಔತಣ ನೀಡುತ್ತಾರೆ. ಆದರೆ ಎನ್‌ಡಿಎ ಸಚಿವರ ಶೈಲಿ ಸಂಪೂರ್ಣ ಭಿನ್ನ. ಕೃಷಿ ಸಚಿವ ರಾಧಾ ಮೋಹನ ಸಿಂಗ್ ಹಾಗೂ ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಂ ವಿಲಾಸ್ ಪಾಸ್ವಾನ್ ಕೂಡಾ ಇಂಥ ಔತಣ ನೀಡಿದರು. ಆದರೆ ಪತ್ರಕರ್ತರು ಯುಪಿಎ ಸಚಿವ ರಘುವಂಶ ಪ್ರಸಾದ್ ಯಾದವ್ ಅವರ ಭರ್ಜರಿ ಔತಣವನ್ನು ಈ ವೇಳೆ ನೆನಪಿಸಿಕೊಂಡರು. ಸಹಜವಾಗಿ ಯುಪಿಎ ಸಚಿವರು ಭಾರೀ ದುಂದುವೆಚ್ಚಕ್ಕೆ ಹೆಸರಾದವರು. ಆದರೆ, ಅದು ಪ್ರಧಾನಿ ಕಾರ್ಯಾಲಯದ ಗಮನಕ್ಕೆ ಬಂದ ಬಳಿಕ ಸಮಾರಂಭವು ಸರಳವಾಗಿತ್ತು. ಆದರೆ ಪತ್ರಕರ್ತರಿಗೆ ಯುಪಿಎ ಸಚಿವರೇ ಮಹಾನ್ ಆತಿಥೇಯರಾಗಿದ್ದರು.


‘ನಮ್ಮವನು’ ಮತ್ತು ಟ್ರಂಪ್
ಇತ್ತೀಚೆಗೆ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಹಲವು ಮಂದಿ ಪತ್ರಕರ್ತರಿಗೆ ಸೋನಿಯಾಗಾಂಧಿಯವರನ್ನು ಸುತ್ತುವರಿದು ಅನೌಪಚಾರಿಕ ಸಂವಾದ ಮಾಡುವ ಅವಕಾಶ ಸಿಕ್ಕಿತು. ಸಾಮಾನ್ಯವಾಗಿ ಉತ್ತರಗಳನ್ನು ನೀಡುವಲ್ಲಿ ಸೋನಿಯಾ ತೀರಾ ಅಂತರ್ಮುಖಿ. ಆದರೆ ಈ ಸಂವಾದದಲ್ಲಿ ವಿಶ್ವದ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಹಾಗೂ ಅಮೆರಿಕದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆ, ಅಧ್ಯಕ್ಷ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಹಲವು ಪ್ರಶ್ನೆಗಳು ಎದುರಾದವು. ಅದರಲ್ಲಿ ನಿರ್ದಿಷ್ಟ ಪ್ರಶ್ನೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಮುನ್ನಡೆ ಸಾಧಿಸಿದ ವಿಚಾರಕ್ಕೆ ಸಂಬಂಧಿಸಿದ್ದಾಗಿತ್ತು. ಆತ ಅಮೆರಿಕದ ಅಧ್ಯಕ್ಷರಾದರೆ ಏನಾಗಬಹುದು? ಎಂಬ ಪ್ರಶ್ನೆಗೆ ಸೋನಿಯಾ ಒಂದು ಕ್ಷಣ ನೋಡಿ, ನಮ್ಮ ವ್ಯಕ್ತಿ ಟ್ರಂಪ್ ಅವರ ಸಮಕ್ಕೆ ಬರುತ್ತಾರೆ ಎಂದು ನಾನು ಭಾವಿಸಿದ್ದೇನೆ ಎಂದು ಉತ್ತರಿಸಿದರು. ಎಲ್ಲರೂ ನಕ್ಕರೆ, ಸೋನಿಯಾ ನಿರ್ಭಾವುಕರಾಗಿದ್ದರು. ಬಹುಶಃ ಅವರು ಪ್ರಸ್ತಾಪಿಸಿದ, ‘ನಮ್ಮ ವ್ಯಕ್ತಿ’ ಬಹುಶಃ ಮೋದಿ; ರಾಹುಲ್ ಅಲ್ಲ.


ತಪ್ಪಿಸಿಕೊಳ್ಳುವ ಮಾರ್ಗ
ಒಂದು ಕಾಲದಲ್ಲಿ ದಿಲ್ಲಿ ಒಬ್ಬ ವ್ಯಕ್ತಿ ಬಾಬೂ (ಇಂಗ್ಲಿಷ್ ಬಲ್ಲ ಬುದ್ಧಿಜೀವಿ) ಆಗಲು ಸೂಕ್ತ ಸ್ಥಳವಾಗಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ದಿಲ್ಲಿ ಸರಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ರಾಷ್ಟ್ರ ರಾಜಧಾನಿಯಲ್ಲಿ ಕೆಲಸ ಮಾಡಲು ಭೀತರಾಗುತ್ತಿದ್ದಾರೆ ಹಾಗೂ ಹೊರಗಿನ ಪ್ರದೇಶಗಳಿಗೆ ನಿಯೋಜನೆ ಮೇಲೆ ತೆರಳಲು ತುದಿಗಾಗಲ್ಲಿ ನಿಲ್ಲುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ದಿಲ್ಲಿ ಸರಕಾರದ ಕ್ಯಾಚ್-22 ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವುದು. ಅವರ ಪ್ರಕಾರ, ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾತು ಕೇಳಿದರೆ, ಅವರ ವಿರುದ್ಧವಾಗಿ ಗುಪ್ತವರದಿ ಹೋಗುವ ಭಯವಿದೆ. ಅವರ ವೃತ್ತಿಯಲ್ಲಿ ಮಹತ್ವದ್ದಾಗಿರುವ ಈ ವರದಿಯನ್ನು ಪರಿಶೀಲಿಸುವವರು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್. ಅವರು ಲೆಫ್ಟಿನೆಂಟ್ ಗವರ್ನರ್ ಪಕ್ಷ ವಹಿಸಿದರೆ, ಅವರನ್ನು ಬಿಜೆಪಿ ತಂಡದ ಅಧಿಕಾರಿ ಎಂದು ಬ್ರಾಂಡ್ ಮಾಡಲಾಗುತ್ತದೆ. ಇದು ಎಲ್ಲ ಇಲಾಖೆ ಹಾಗೂ ಸಚಿವಾಲಯಗಳಿಗೆ ಅನ್ವಯಿಸುತ್ತದೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಅಂತಾರರಾಷ್ಟ್ರೀಯ ಏಜೆನ್ಸಿಗಳ ಕೆಲಸವನ್ನು ಅನಿರೀಕ್ಷಿತ ಲಾಭ ಎಂದು ಸ್ವಾಗತಿಸಲಾಗುತ್ತದೆ.


ಮ್ಯಾನ್ ವಿದ್ ಎ ಮಿಷನ್
ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕಠಿಣ ನಿರ್ಧಾರಗಳ ಮನುಷ್ಯ ಎಂಬ ಇಮೇಜ್ ಇದೆ. ಕಡತಗಳ ಬೆನ್ನು ಹತ್ತಿ ಅದರ ಇತ್ತೀಚಿನ ಬೆಳವಣಿಗೆಗಳನ್ನು ದಿನವಹಿಯಾಗಿ ತಿಳಿಯುವಲ್ಲಿ ಗಡ್ಕರಿ ನಿಸ್ಸೀಮ. ಇತ್ತೀಚೆಗೆ ಒಂದು ನಿರ್ದಿಷ್ಟ ಕಡತ ಹಣಕಾಸು ಸಚಿವಾಲಯದಲ್ಲಿ ಸಿಕ್ಕಿಹಾಕಿಕೊಂಡದ್ದು ಅವರ ಗಮನಕ್ಕೆ ಬಂತು ಎನ್ನಲಾಗಿದೆ. ತಕ್ಷಣ ಫೋನ್ ಎತ್ತಿಕೊಂಡು ಹಣಕಾಸು ಖಾತೆ ರಾಜ್ಯ ಸಚಿವರಿಗೆ ಕರೆ ಮಾಡಿ, ತ್ವರಿತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಬಿಜೆಪಿಯ ಮಾಜಿ ಅಧ್ಯಕ್ಷರೂ ಆದ ಗಡ್ಕರಿಗೆ, ತಮ್ಮ ಸಚಿವಾಲಯಕ್ಕೆ ಸಂಬಂಧಪಡದವರಾಗಿದ್ದರೂ, ಇತರ ಸಚಿವರು ಅಥವಾ ಅಧಿಕಾರಿಗಳ ಜತೆ ನಯವಾಗಿ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುವುದು ತಪ್ಪುಎನಿಸುವುದಿಲ್ಲ. ಈ ಬೆಳವಣಿಗೆಗಳನ್ನು ಪ್ರಧಾನಿ ಸಚಿವಾಲಯ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದು ಹೇಳಲಾಗಿದೆ.


ಸಿನ್ಹಾ ಅವರಿಂದ ಕಲಿಕೆ
ಬಿಜೆಪಿ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರುತ್ತಿರುವ ಹಲವರಿಗೆ ಸಂಸದ ಶತ್ರುಘ್ನ ಸಿನ್ಹಾ ಸಹಜವಾಗಿಯೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಅವರ ಅಧಿಕೃತ ಜೀವನ ಚರಿತ್ರೆಯ ಬಿಡುಗಡೆ ಸಮಾರಂಭ ಹೊಸದಿಲ್ಲಿಯಲ್ಲಿ ಅದ್ದೂರಿ ಸಮಾರಂಭವಾದದ್ದು ಹಲವರ ಹುಬ್ಬೇರಲು ಕಾರಣವಾಗಿದೆ. ಆದರೆ ನಿತೀಶ್ ಕುಮಾರ್ ಹಾಗೂ ಲಾಲೂ ಪ್ರಸಾದ್ ಯಾದವ್ ಅವರ ಗೈರುಹಾಜರಿ ಗಮನಕ್ಕೆ ಬಾರದಿರಲಿಲ್ಲ. ಆದರೆ ಇದಕ್ಕೆ ಬೆನ್ನೆಲುಬಾಗಿ ನಿಂತದ್ದು ಅಮರ್‌ಸಿಂಗ್. ತಮ್ಮ ಕುಬ್ಜ ದೇಹವನ್ನೂ ಮೀರಿದ ದೊಡ್ಡ ಹೂಗುಚ್ಛದೊಂದಿಗೆ ಬಂದು ಶುಭ ಹಾರೈಸಿದ ಸಿಂಗ್ ಎಲ್ಲರ ಕಣ್ಣುಕುಕ್ಕುವಂತೆ ಮಾಡಿದರು. ಸಿಂಗ್ ಅವರೂ ತಮ್ಮ ನೆನಪುಗಳಿಗೆ ಅಕ್ಷರರೂಪ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಪುಸ್ತಕ ರಾಜಕೀಯ, ಚಿತ್ರರಂಗ ಹಾಗೂ ವ್ಯವಹಾರದ ಎಲ್ಲ ಅಂಶಗಳನ್ನು ಬಹಿರಂಗಗೊಳಿಸುವ ಆಶ್ವಾಸನೆ ನೀಡಿದೆ. ಅವರ ಹಳೆಯ ಸ್ನೇಹಿತ ಅಮಿತಾಬ್ ಬಚ್ಚನ್ ಹಾಗೂ ಕುಟುಂಬವನ್ನು ಸಮಾರಂಭಕ್ಕೆ ಕರೆತರಲು ನಿರ್ಧರಿಸಿದ್ದಾರೆ.

share
ಪತ್ರಕರ್ತ
ಪತ್ರಕರ್ತ
Next Story
X