ನಾಳೆಯಿಂದ ಮೀಡಿಯಾ ಮಂಥನ್ ಕಾರ್ಯಾಗಾರ
ಮಂಗಳೂರು, ಜ.16: ನಗರದ ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಸಮೂಹ ಮಾಧ್ಯಮ ವಿಭಾಗ ‘ಕಂಟೆಂಟ್ ಜನರೇಶನ್ ಫಾರ್ ಸೋಶಿಯಲ್ ಮೀಡಿಯಾ’ ಶೀರ್ಷಿಕೆಯಡಿ ‘ಮೀಡಿಯಾ ಮಂಥನ್-2016’ ಎಂಬ ರಾಷ್ಟ್ರೀಯ ಕಾರ್ಯಾಗಾರ ಹಾಗೂ ಮಾಧ್ಯಮ ಮೇಳ ಜ.18 ಮತ್ತು 19ರಂದು ಆಯೋಜಿಸಿದೆ. ಈ ಸಂದರ್ಭ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಸ್ಪರ್ಧಿಸಬಹುದು ಎಂದು ಉಪನ್ಯಾಸಕ ರೆ.ಫಾ.ವಿಲಿಯಂ ಮಾರ್ಷೆಲ್ ರೊಡ್ರಿಗಸ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Next Story





