'ವಾರ್ತಾಭಾರತಿ' ಕಚೇರಿಗೆ ಪ್ರಕಾಶ್ ಕಾರಟ್ ಭೇಟಿ

ಮಂಗಳೂರು, ಜ.16: ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ, ಮಾಜಿ ಪ್ರಧಾನ ಕಾರ್ಯ ದರ್ಶಿ ಪ್ರಕಾಶ್ ಕಾರಟ್ ಶುಕ್ರವಾರ ಮಂಗಳೂರಿನಲ್ಲಿರುವ ‘ವಾರ್ತಾಭಾರತಿ’ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ಪತ್ರಿಕೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಪತ್ರಿಕಾ ಬಳಗದೊಂದಿಗೆ ಬೆರೆತ ಕಾರಟ್, ‘ವಾರ್ತಾಭಾರತಿ‘ಯ ಜಾತ್ಯತೀತ ನಿಲುವು ಹಾಗೂ
ಜನಪರ ಕಾಳಜಿಯ ಪತ್ರಿಕೋದ್ಯಮ ವನ್ನು ಶ್ಲಾಘಿಸಿದರು. ಮುಂದಿನ 2 ವರ್ಷಗಳಲ್ಲಿ ದೇಶದ ಯುವ ಜನತೆಯನ್ನು ಪಕ್ಷದ ಹತ್ತಿರ ತರಲು ಯೋಜನೆಗಳನ್ನು ಹಾಕಿಕೊಂಡಿರುವು ದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಕಾಸರಗೋಡು ಜಿಲ್ಲೆಯ ಸಿಪಿಎಂ ನಾಯಕ ಕೆ.ಆರ್.ಜಯಾನಂದ್ ಉಪಸ್ಥಿತರಿದ್ದರು. ಕಾರಟ್ ರನ್ನು ‘ವಾರ್ತಾಭಾರತಿ’ಯ ಮಂಗಳೂರು ಬ್ಯೂರೋ ಮುಖ್ಯಸ್ಥ ಬಿ.ಎನ್.ಪುಷ್ಪರಾಜ್ ಸ್ವಾಗತಿಸಿದರು. ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
Next Story





