ಪ್ರತಿ ಜಿಲ್ಲೆಯಲ್ಲೂ ವಿಕಲಚೇತನ ಭವನ: ರಾಜಣ್ಣ

ದ.ಕ.ದಲ್ಲಿ 10 ಎಕರೆ ಜಮೀನು ಗುರುತಿಸಲು ಜಿಲ್ಲಾಧಿಕಾರಿಗೆ ಸೂಚನೆ
ಮಂಗಳೂರು, ಜ.16: ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವಿಕಲಚೇತನ ಭವನ ನಿರ್ಮಾಣ ಮಾಡಲು ಚಿಂತಿಸಲಾಗಿದ್ದು, ದ.ಕ. ಜಿಲ್ಲೆ ಯಲ್ಲಿ ಇದಕ್ಕೆ ಹತ್ತು ಎಕರೆ ಜಾಗ ಗುರುತಿಸುವಂತೆ ರಾಜ್ಯ ವಿಕಲಚೇತನ ಇಲಾಖೆಯ ಆಯುಕ್ತ ಕೆ.ಎಸ್.ರಾಜಣ್ಣ ದ.ಕ ಜಿಲ್ಲಾ ಧಿಕಾರಿಗೆ ಸೂಚಿಸಿದರು.
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಜಿಲ್ಲಾಮಟ್ಟದ ಅಧಿಕಾರಿ ಗಳೊಂದಿಗೆ ನಡೆದ ಸಭೆಯಲ್ಲಿ ಮಾತ ನಾಡಿದ ಅವರು, ಪ್ರತಿ ಜಿಲ್ಲೆಗೂ ವಿಕಲಚೇತನ ಭವನಕ್ಕೆ 2 ಕೋ.ರೂ. ನೀಡಲಾಗುವುದು. ಸಕಲ ಸೌಕರ್ಯ ಗಳನ್ನು ಹೊಂದಿರುವ ಈ ಭವನದಲ್ಲಿ ಗ್ರಾಮೀಣ ಭಾಗಗಳಿಂದ ಬರುವ ವಿಕಲ ಚೇತನರಿಗೆ ತಂಗಲು ವಸತಿ ವ್ಯವಸ್ಥೆ ಯನ್ನು ಮಾಡಲಾಗು ವುದು ಎಂದು ತಿಳಿಸಿದರು.
ಎಲ್ಲ ಸರಕಾರಿ ಕಚೇರಿಗ ಳಲ್ಲೂ ವಿಕಲಚೇತನ ಸ್ನೇಹಿ ವ್ಯವಸ್ಥೆಗಳು ಇರಬೇಕು. ವಿಕಲ ಚೇತನರಿಗಾಗಿ ರ್ಯಾಂಪ್‌ಗಳ ನಿರ್ಮಾ ಣವಾಗಬೇಕು. ವಿಕಲಚೇತನರು ಇರುವ ಮನೆಗಳನ್ನು ಗುರುತಿಸಿ ಅವ ರಿಗೆ ಸರಕಾರದ ನಿಧಿ ಯನ್ನು ಬಳಸಿ ವಿಕಲಚೇತನ ಸ್ನೇಹಿ ಶೌಚಾಲಯವನ್ನು ನಿರ್ಮಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಜಿಲ್ಲೆಯಲ್ಲಿ 3 ಸಾವಿರ ಎಂಡೋಸಲ್ಫಾನ್ ಸಂತ್ರಸ್ತರಿಗೆ ಕಳೆದ ವರ್ಷದಿಂದ ಮಾಸಾಶನ ನೀಡಲಾ ಗುತ್ತಿದೆ. ರ್ಯಾಂಪ್ ನಿರ್ಮಾಣ ಮಾಡದೆೆ ಇರುವ ಸರಕಾರಿ ಕಚೇರಿ ಗಳ ವಿರುದ್ಧ ನೋಟಿಸ್ ಜಾರಿಗೊ ಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಜಿಪಂ ಸಿಇಒ ಪಿ.ಐ. ಶ್ರೀವಿದ್ಯಾ ಉಪಸ್ಥಿತರಿದ್ದರು.





