ರಾಘವೇಶ್ವರ ಸ್ವಾಮಿ ಅತ್ಯಾಚಾರ ಪ್ರಕರಣ; ವಿಚಾರಣೆ ಫೆ.19ಕ್ಕೆ ಮುಂದೂಡಿದ ಸೆಷನ್ ನ್ಯಾಯಾಲಯ

ಬೆಂಗಳೂರು, ಜ.16: ಹರಿಕಥಾ ಗಾಯಕಿ ಪ್ರೇಮಲತಾ ದಿವಾಕರ್ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ರಾಘವೇಶ್ವರ ಶ್ರೀಗಳು ಶನಿವಾರ ಸೆಷನ್ ಕೋರ್ಟ್‌ಗೆ ಖುದ್ದು ಹಾಜರಾದರು.
ನ್ಯಾಯಾಧೀಶರ ಮುಂದೆ ಹಾಜರಾದ ಶ್ರೀಗಳು ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳಿಗೆ ಸಹಕರಿಸಿದರು. ನಂತರ ವಿಚಾರಣೆ ನಡೆಸಿದ ನ್ಯಾಯಾಧೀಶರು ಫೆ.19ಕ್ಕೆ ವಿಚಾರಣೆ ಮುಂದೂಡಿದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಚಾರ್ಜ್‌ಸ್ಟ್ರೇಟ್ ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಪ್ರಕರಣವನ್ನು ಸಿವಿಲ್ ಕೋರ್ಟ್‌ಗೆ ವರ್ಗಾವಣೆ ಮಾಡಿತ್ತು. ತದ ನಂತರ ವಿಚಾರಣೆ ನಡೆಸಿದ ಸೆಷನ್ ಕೋರ್ಟ್ ಪ್ರಕರಣ ಸಂಬಂಧ ವಿಚಾರಣೆಗಾಗಿ ಶ್ರೀಗಳು ಖುದ್ದು ಹಾಜರಾಗುವಂತೆ 2 ತಿಂಗಳ ಹಿಂದೆ ನೋಟಿಸ್ ನೀಡಿತ್ತು.
Next Story





