Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮೂಡುಬಿದಿರೆಯಲ್ಲಿ ಪೇಜಾವರ ಶ್ರೀಗಳಿಗೆ...

ಮೂಡುಬಿದಿರೆಯಲ್ಲಿ ಪೇಜಾವರ ಶ್ರೀಗಳಿಗೆ ಗುರುವಂದನೆ

ವಾರ್ತಾಭಾರತಿವಾರ್ತಾಭಾರತಿ17 Jan 2016 12:02 AM IST
share
ಮೂಡುಬಿದಿರೆಯಲ್ಲಿ ಪೇಜಾವರ ಶ್ರೀಗಳಿಗೆ ಗುರುವಂದನೆ

ಮೂಡುಬಿದಿರೆ: ದಾಖಲೆಯ ಐದನೇ ಪರ್ಯಾಯ ಪೀಠಾರೋಹಣದ ಸಂಭ್ರಮದಲ್ಲಿರುವ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಶನಿವಾರ ಸಂಜೆ ಜ್ಞಾನಕಾಶಿ ಮೂಡುಬಿದಿರೆಗೆ ಚಿತ್ತೈಸಿ ಹಲವೆಡೆ ಗುರುವಂದನೆ ಸ್ವೀಕರಿಸಿದರು.

ಮೂಡುಬಿದಿರೆಯ ಶ್ರೀ ಜೈನಮಠದಲ್ಲಿ ಭಟ್ಟಾರಕ ಶ್ರೀಗಳವರಿಂದ ವಿನಯಾಂಜಲಿ, ಶತಮಾನೋತ್ಸವ ಸಂಭ್ರಮದಲ್ಲಿರುವ ಮೂಡುಬಿದಿರೆಯ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ ಹಾಗೂ ಉದ್ಯಮಿ ಧನಲಕ್ಷ್ಮೀ ಸಮೂಹ ಸಂಸ್ಥೆಯ ಕೆ. ಶ್ರೀಪತಿ ಭಟ್ ಅವರ ನಿವಾಸದಲ್ಲಿ ತುಲಾಭಾರ, ಗುರುವಂದನೆ, ಭಜಕರನ್ನುದ್ದೇಶಿಸಿ ಆಶೀರ್ವಚನ, ಫಲಮಂತ್ರಾಕ್ಷತೆ ನೀಡಿ ಹರಸಿದರು.ಇದೇ ವೇಳೆ ಅಪರಾಹ್ನ ಉಡುಪಿ ಪರ್ಯಾಯಕ್ಕೆ ಮೂಡುಬಿದಿರೆಯಿಂದ ಬೃಹತ್ ಹೊರೆಕಾಣಿಕೆಯನ್ನು ಕಳಿಸಿಕೊಡಲಾಗಿದೆ. ಜೈನ-ವೈದಿಕ ಸಾಮರಸ್ಯಕ್ಕೆ ಮಾದರಿ: ಕರಾವಳಿಯಲ್ಲಿ ಅವಿಭಜಿತ ದಕ ಜಿಲ್ಲೆಯಲ್ಲಿ ಜೈನ ಮತ್ತು ವೈದಿಕ ಮತೀಯ ಬಾಂಧವ್ಯ ಸಾಮರಸ್ಯಕ್ಕೆ ಉತ್ತಮ ಮಾದರಿಯಾಗಿದೆ. ತುಳುನಾಡಿನಲ್ಲಿ ಹಲವೆಡೆ ದೇವಳಗಳ ಒಡೆತನ ಜೈನರದ್ದಾದರೆ ಅರ್ಚಕರು ವೈದಿಕರಾಗಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜೈನಧರ್ಮ ಅಹಿಂಸೆ ಮತ್ತು ನೈತಿಕತೆಗೆ ಹೆಚ್ಚಿನ ಪ್ರಚೋದನೆ ನೀಡುತ್ತಿದೆ ಎಂದು ಪೇಜಾವರಶ್ರೀಗಳವರು ಹೇಳಿದರು. ಅವರು ಜೈನ ಮಠದಲ್ಲಿ ಭಜಕರನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಎಲ್ಲದರಲ್ಲಿಯೂ ಭಗವಂತನನ್ನು ಕಾಣುವುದು ಜೈನಮತದ ವಿಶೇಷತೆ ಎಂದ ಅವರು ಮಧ್ವಾಚಾರ್ಯರೂ ಯಜ್ಞಗಳಲ್ಲಿ ಹಿಂಸೆಯನ್ನು ಒಪ್ಪಿರಲಿಲ್ಲ ಎಂದರು. ಭಟ್ಟಾರಕ ಶ್ರೀಗಳವರು ಮಠದ ವತಿಯಿಂದ ಪೇಜಾವರ ಶ್ರೀಗಳವರಿಗೆ ವಿನಯಾಂಜಲಿ ಸಲ್ಲಿಸಿ ಸಮ್ಮಾನಿಸಿದರು. ವಿಶ್ವದಾಖಲೆಯ ಐದನೇ ಬಾರಿಗೆ ಪರ್ಯಾಯ ಪೀಠವನ್ನೇರುವ ಶ್ರೀಗಳವರ ಸನಾತನ ಪರಂಪರೆಯ ಜಾಗೃತಿ ಕಾರ್ಯ ಆದರ್ಶ ಎಲ್ಲರಿಗೂ ದೊರೆಯುವಂತಾಗಲಿ ಎಂದವರು ನುಡಿದರು.

ಇದೇ ಸಂದರ್ಭದಲ್ಲಿ ಪಂಡಿತ್ ರೆಸಾರ್ಟ್‌ನ ಲಾಲ್ ಗೋಯಲ್ ದಂಪತಿಗಳು ಪೇಜಾವರ ಶ್ರೀಗಳವರನ್ನು ಗೌರವಿಸಿದರು. ಪಟ್ನಶೆಟ್ಟಿ ಸುದೇಶ್ ಕುಮಾರ್, ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್, ಶಿರ್ತಾಡಿ ಸಂಪತ್ ಸಾಮ್ರಾಜ್ಯ, ಬಾಹುಬಲಿ ಪ್ರಸಾದ್ , ಕೆ.ಕೃಷ್ಣರಾಜ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಸೊಸೈಟಿ ಬ್ಯಾಂಕಿಗೆ ಶ್ರೀ:

 ಶತಮಾನೋತ್ಸವ ಸಂಭ್ರಮದಲ್ಲಿರುವ ಮೂಡುಬಿದಿರೆಯ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್‌ಗೆ ಪೇಜಾವರ ಶ್ರೀಗಳವರು ಅನುಗ್ರಹ ಭೇಟಿ ನೀಡಿದರು. ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ,ಜಯಶ್ರೀ ಅಮರನಾಥ ಶೆಟ್ಟಿ ದಂಪತಿ ಆಡಳಿತ ಮಂಡಳಿಯ ಪರವಾಗಿ ಶ್ರೀಗಳವರನ್ನು ಸಮ್ಮಾನಿಸಿ ಆರತಿ ಬೆಳಗಿ ಗೌರವಿಸಿದರು. ವ್ಯಕ್ತಿಗಳಿಗೆ ಆಯಸ್ಸು ಹೆಚ್ಚಿದರೆ ಜೀವಭಯ. ಆದರೆ ಸಂಸ್ಥೆಗಳಿಗೆ ನಿರ್ಭಯ. ಸೊಸೈಟಿ ಬ್ಯಾಂಕು ಚಿರಂಜೀವಿಯಾಗಲಿ. ಗ್ರಾಹಕರಿಗೆ ಹೆಚ್ಚಿನ ಸೇವೆ, ಎಲ್ಲರ ಅಭಿವೃದ್ಧಿ ಸಾಧ್ಯವಾಗಲಿ ಎಂದು ಶ್ರೀಗಳವರು ಹರಸಿದರು. ಬ್ಯಾಂಕಿನ ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್,ಸಿಬಂದಿಗಳು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಹಾಜರಿದ್ದರು. ಶ್ರೀಗಳವರಿಗೆ ತುಲಾಭಾರ: ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಬಳಿ ಶನಿವಾರ ಸಂಜೆ ಉದ್ಯಮಿ ಧನಲಕ್ಷ್ಮೀ ಸಮೂಹ ಸಂಸ್ಥೆಯ ಕೆ. ಶ್ರೀಪತಿ ಭಟ್ ಅವರ ಧನಲಕ್ಷ್ಮೀ ನಿವಾಸದಲ್ಲಿ ಶ್ರೀಗಳವರಿಗೆ ತುಲಾಭಾರ ಗುರುವಂದನೆ,ನಡೆಯಿತು. ಈ ಸಂದರ್ಭದಲ್ಲಿ ಭಜಕರನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳವರು ಭಗವಂತ ಜಗತ್ತಿನ ಬೇರು. ಅವನ ಆರಾಧನೆಯಿಂದ ಲೋಕ ಕಲ್ಯಾಣ. ಜಗತ್ತು ಎಂಬ ಬೀಸು ಕಲ್ಲಿನ ಘರ್ಷಣೆಯಲ್ಲಿ ಭಗವಂತನೆಂಬ ಗೂಟಕ್ಕೆ ಅಂಟಿದ ಭಕ್ತರೆಂಬ ಧಾನ್ಯಗಳಿಗೆ ಯಾವುದೇ ಭಯವಿರದು. ಮಾನವ ಚೀಲವಿದ್ದಂತೆ. ಇಲ್ಲಿ ಭಗವಂತನೆಂಬ ಸಕ್ಕರೆ ತುಂಬಿದ್ದಾಗ ಮಾತ್ರ ಅಲ್ಲಿ ಸಿಹಿ ಇರುತ್ತದೆ ಎಂದವರು ನುಡಿದರು.

ಈ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಮೂಡುಬಿದಿರೆಯ ಸಾರ್ವಜನಿಕ, ಧಾರ್ಮಿಕ ರಂಗದ ಪ್ರಮುಖರಿಗೆ ಅವರು ಫಲಮಂತ್ರಾಕ್ಷತೆ ನೀಡಿ ಹರಸಿದರು.

  

   ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳದ ಅರ್ಚಕ ಅಡಿಗಳ್ ಶ್ರೀನಿವಾಸ ಭಟ್, ಆಲಂಗಾರು ಶ್ರೀ ಈಶ್ವರ ದೇವಸ್ಥಾನದ ಅರ್ಚಕ ಈಶ್ವರ ಭಟ್, ,ಪಡ್ಯಾರಬೆಟ್ಟು ಕ್ಷೇತ್ರದ ಮೊಕ್ತೇಸರ ಜೀವಂಧರ ಕುಮಾರ್, ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಳದ ಆಡಳಿತ ಮೊಕ್ತೇಸರ ಜಿ. ಉಮೇಶ ಪೈ, ಶ್ರೀ ಗೋಪಾಲಕೃಷ್ಣ ದೇವಳದ ಮೊಕ್ತೇಸರ ಗುರುಪ್ರಸಾದ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ, ಮೂಡಾ ಅಧ್ಯಕ್ಷ ಸುರೇಶ್ ಕೊಟ್ಯಾನ್, ಬಿಜೆಪಿಯ ಮುಖಂಡರಾದ ಕೆ.ಪಿ.ಜಗದೀಶ ಅಧಿಕಾರಿ, ಸುದರ್ಶನ ಎಂ, ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ, ನಾರಾಯಣ ಪಿ.ಎಂ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಯುವರಾಜ್ ಜೈನ್, ವಕೀಲರ ಸಂಘದ ಅಧ್ಯಕ್ಷ ಕೆ. ಆರ್.ಪಂಡಿತ್, ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಹರಿಪ್ರಸಾದ್ ರೈ ಬೆಳ್ಳಿಪಾಡಿ, ಮೀನಾಕ್ಷಿ ಜಯಕರ ಆಳ್ವ, ಡಾ.ಹರೀಶ್ ನಾಯಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X