ಅಲಿಝ್ ಕಾರ್ನಟ್‌ಗೆ ಸಿಂಗಲ್ಸ್ ಟ್ರೋಫಿ
ಹೋಬರ್ಟ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿ
ಹೋಬರ್ಟ್, ಜ.16: ಹೋಬರ್ಟ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಕೆನಡಾದ ಎವ್‌ಜಿನಿ ಬೌಚರ್ಡ್ ಅವರ ಪ್ರಾಬಲ್ಯವನ್ನು ಹತ್ತಿಕ್ಕಿದ ಅಲಿಝ್ ಕಾರ್ನೆಟ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಕಿರೀಟ ತನ್ನದಾಗಿಸಿಕೊಂಡರು.
ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕಾರ್ನಟ್ ಅವರು ಬೌಚರ್ಡ್‌ರನ್ನು 6-1, 6-2 ಸೆಟ್‌ಗಳ ಅಂತರದಿಂದ ಸೋಲಿಸಿ ಐದನೆ ಡಬ್ಲಟಿಎ ಪ್ರಶಸ್ತಿಯನ್ನು ಗೆದ್ದುಕೊಂಡರು. ಆಸ್ಟ್ರೇಲಿಯನ್ ಓಪನ್ ಸರಣಿಗೆ ಮೊದಲು ತಾಲೀಮು ಟೂರ್ನಿ ಎನಿಸಿಕೊಂಡಿರುವ ಹೋಬರ್ಟ್ ಇಂಟರ್‌ನ್ಯಾಶನಲ್‌ನಲ್ಲಿ ಕಾರ್ನಟ್ ತನ್ನ ಮೂರನೆ ಪ್ರಯತ್ನದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು.
ಕಳೆದ ವರ್ಷ ಯುಎಸ್ ಓಪನ್ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಸಿದು ಬಿದ್ದ್ದು ಗಾಯಗೊಂಡ ನಂತರ ಬೌಚರ್ಡ್ ಅವರು ಇದೀಗ ಶ್ರೇಷ್ಠ ಪ್ರದರ್ಶನ ನೀಡಿ ಫೈನಲ್ ತನಕ ತಲುಪಿದ್ದಾರೆ.
ಸೋಮವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲಿ ಬೌಚರ್ಡ್ ಅವರು ಅಲೆಕ್ಸಾಂಡರ್ ಕ್ರುನಿಕ್‌ರನ್ನು ಹಾಗೂ ಕಾರ್ನೆಟ್ ಅವರು ಬೊಜಾನಾ ಜಾವಾನೊವ್‌ಸ್ಕಿ ಅವರನ್ನು ಎದುರಿಸಲಿದ್ದಾರೆ.





