ಉಗ್ರರ ಸಂಚು ಸಫಲಗೊಳ್ಳಲು ಬಿಡಬಾರದು: ಭಾರತ, ಪಾಕ್‌ಗೆ ಅಮೆರಿಕ ಹಿತವಚನ
ವಾಶಿಂಗ್ಟನ್, ಜ. 16: ಭಾರತ-ಪಾಕ್ ಶಾಂತಿ ಪ್ರಕ್ರಿಯೆಯನ್ನು ಬುಡಮೇಲುಗೊಳಿಸಲು ಭಯೋತ್ಪಾದಕ ಗುಂಪುಗಳು ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತವೆ ಹಾಗೂ ಇಂಥ ಪ್ರಯತ್ನಗಳು ಮಾತುಕತೆಗಳನ್ನು ಮುಂದುವರಿಸಲು ಉಭಯ ದೇಶಗಳಿಗೆ ಪ್ರೇರಣೆಯಾಗಬೇಕು ಎಂದು ಅಮೆರಿಕ ಹೇಳಿದೆ.
‘‘ಆದರೆ, ಭಯೋತ್ಪಾದಕರ ಸಂಚು ಸಫಲಗೊಳ್ಳುವುದನ್ನು ನೋಡಲು ನಾವು ಇಚ್ಛಿಸುವುದಿಲ್ಲ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಇತ್ತೀಚೆಗೆ ನಡೆದ ಮಾತುಕತೆಗಳಿಂದ ನಾವು ಉತ್ತೇಜಿತರಾಗಿದ್ದೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಜಾನ್ ಕಿರ್ಬಿ ಸುದ್ದಿಗಾರರಿಗೆ ಹೇಳಿದರು.
Next Story





