ತೈವಾನ್‌ಗೆ ಮೊದಲ ಮಹಿಳಾ ಅಧ್ಯಕ್ಷರು
ತೈಪೆ, ಜ. 16: ತೈವಾನ್‌ನ ಪ್ರಧಾನ ಪ್ರತಿಪಕ್ಷದ ನಾಯಕಿ ತ್ಸಾಯಿ ಇಂಗ್ ವೆನ್ ದ್ವೀಪ ರಾಷ್ಟ್ರದ ಪ್ರಥಮ ಮಹಿಳಾ ಅಧ್ಯಕ್ಷರಾಗಲಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ಅವರ ಪಕ್ಷ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಆಡಳಿತಾರೂಢ ಕುವೊಮಿಂಟಾಂಗ್ ಪಕ್ಷ ಸೋಲೊಪ್ಪಿಕೊಂಡಿದೆ.
ಚೀನಾದೊಂದಿಗೆ ನಿಕಟ ಬಾಂಧವ್ಯ ಹೊಂದಲು ಹೊರಟ ನಿರ್ಗಮನ ಸರಕಾರದ ನಡೆಗೆ ಮತದಾರರು ಅಸಮ್ಮತಿ ವ್ಯಕ್ತಪಡಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
Next Story





