ಶಾಸನಸಾಸ್ತ್ರ ಡಿಪ್ಲೊಮಾ ತರಗತಿಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜ. 16: ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಪ್ರಸಕ್ತ ಸಾಲಿನ ಶಾಸನಸಾಸ್ತ್ರ ಡಿಪ್ಲೊಮಾ ತರಗತಿಗಳಿಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಶಾಸನಶಾಸ್ತ್ರ ಡಿಪ್ಲೊಮಾ ತರಗತಿಯಲ್ಲಿ ಶಾಸನ ಲಿಪಿಗಳನ್ನು ಓದುವ ತರಬೇತಿ, ಶಾಸನಗಳ ಸಂಗ್ರಹವಿಧಾನ, ಅಧ್ಯಯನ, ಪ್ರಬಂಧ ರಚನೆ ಇತ್ಯಾದಿ ವೌಲಿಕ ಅಂಶಗಳನ್ನು ತರಗತಿಗಳಲ್ಲಿ ಬೋಧಿಸಲಾಗುವುದು. ಆಸಕ್ತರು ಅರ್ಜಿಗಳನ್ನು ಜ.18ರಿಂದ ಕಸಾಪ ಪುಸ್ತಕ ಮಳಿಗೆಯಲ್ಲಿ 25 ರೂ.ಗಳನ್ನು ಸಲ್ಲಿಸಿ ಪಡೆಯಬಹುದು. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜ.30 ಆಗಿದ್ದು, ದಂಡ ಶುಲ್ಕಸಹಿತ ದಿನಾಂಕ ಫೆ.3ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಡಾ.ಚಿತ್ತಯ್ಯ ಪೂಜಾರ್ ಸಂಚಾಲಕರು, ಸಂಶೋಧನಾ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ, ಬೆಂಗಳೂರು-18 ಮತ್ತು ದೂರವಾಣಿ ಸಂಖ್ಯೆ 080 26623584, 8945637247 ಅನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





