Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಮೂರನೆ ಏಕದಿನ ಪಂದ್ಯದಲ್ಲಿ...

ಮೂರನೆ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಮೂರು ವಿಕೆಟ್‌ಗಳ ಜಯ ;ಧೋನಿ ಪಡೆಗೆ ಹ್ಯಾಟ್ರಿಕ್‌ ಸೋಲು

ವಾರ್ತಾಭಾರತಿವಾರ್ತಾಭಾರತಿ17 Jan 2016 11:33 AM IST
share
ಮೂರನೆ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಮೂರು ವಿಕೆಟ್‌ಗಳ ಜಯ ;ಧೋನಿ ಪಡೆಗೆ ಹ್ಯಾಟ್ರಿಕ್‌ ಸೋಲು

ಮೆಲ್ಬೋರ್ನ್, ಜ.17: ಇಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದ್ದು, ಹ್ಯಾಟ್ರಿಕ್ ಸೋಲಿನೊಂದಿಗೆ ಸರಣಿಯನ್ನು ಕಳೆದುಕೊಂಡಿದೆ.
ಇಲ್ಲಿನ ಮೆಲ್ಬೊರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 296 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ತಂಡ ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಗ್ಲೆನ್ ಮ್ಯಾಕ್ಸ್‌ವೆಲ್(96) ಮತ್ತು ಆರಂಭಕಾರ ಶಾನ್ ಮಾರ್ಷ್ 62 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವಿರಾಟ್ ಕೊಹ್ಲಿ ಶತಕದ ನೆರವಿನಲ್ಲಿ ಭಾರತ ಮತ್ತೊಮ್ಮೆ 290ಕ್ಕೂ ಅಧಿಕ ರನ್ ದಾಖಲಿಸಿದ್ದರೂ, ಬೌಲಿಂಗ್ ದೌರ್ಬಲ್ಯ ತಂಡದ ಸೋಲಿಗೆ ಕಾರಣವಾಯಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟೀಮ್ ಇಂಡಿಯಾ ಉಪನಾಯಕ ವಿರಾಟ್ ಕೊಹ್ಲಿ ದಾಖಲಿಸಿದ 24ನೆ ಶತಕದ ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 295 ರನ್ ಗಳಿಸಿತ್ತು. ಕೊಹ್ಲಿ 171 ನಿಮಿಷಗಳ ಬ್ಯಾಟಿಂಗ್‌ನಲ್ಲಿ 117 ಎಸೆತಗಳನ್ನು ಎದುರಿಸಿದ್ದರು. 7ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 117 ರನ್ ಗಳಿಸಿದ್ದರು.
 ಗ್ಲೆನ್ ಮ್ಯಾಕ್ಸ್‌ವೆಲ್ 83 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 96 ರನ್ ಗಳಿಸಿ, ಕೊಹ್ಲಿಯ ಶತಕವನ್ನು ವ್ಯರ್ಥಗೊಳಿಸಿದರು. ಭಾರತ ಬೌಲಿಂಗ್ ಮತ್ತು ಫೀಲ್ಡಿಂಗ್ ವೈಫಲ್ಯದಿಂದಾಗಿ ಮತ್ತೊಮ್ಮೆ ಕೈ ಸುಟ್ಟುಕೊಂಡಿತು. ಬೌಲರ್‌ಗಳಾದ ಉಮೇಶ್ ಯಾದವ್ (9.5-0-68-2), ಬರೀಂದರ್ ಸ್ರಾನ್(8-0-63-0) ಮತ್ತು ಇಶಾಂತ್ ಶರ್ಮ(10-0-53-2) ವೈಫಲ್ಯದ ಲಾಭ ಪಡೆದ ಆಸ್ಟ್ರೇಲಿಯದ ದಾಂಡಿಗರು ಭಾರತಕ್ಕೆ ಮತ್ತೊಮ್ಮೆ ಗೆಲುವು ನಿರಾಕರಿಸಿದರು.
ಆ್ಯರೊನ್ ಫಿಂಚ್ (21ರನ್, 23ಎಸೆತ, 3ಬೌಂಡರಿ) ಮತ್ತು ಶಾನ್ ಮಾರ್ಷ್ (62ರನ್, 73ಎಸೆತ, 6ಬೌಂಡರಿ) ಅವರು ಆರಂಭದಲ್ಲೇ ಗೆಲುವಿಗೆ ಅಗತ್ಯದ ಸರಾಸರಿ ರನ್ ದಾಖಲಿಸಿದ್ದರು. ಭಾರತದ ಬೌಲಿಂಗ್ ಬದಲಾವಣೆ ಪ್ರಭಾವ ಬೀರಲಿಲ್ಲ.
 
ಚೊಚ್ಚಲ ಪಂದ್ಯವನ್ನಾಡುತ್ತಿರುವ ಗುರುಕೀರತ್ ಸಿಂಗ್ ಮಾನ್ 6ನೆ ಓವರ್‌ನಲ್ಲಿ ಪಿಂಚ್ ಕ್ಯಾಚ್ ಕೈಚೆಲ್ಲಿದರು. ಆಗ ಅವರ ಸ್ಕೋರ್ 20 ಆಗಿತ್ತು. ಆದರೆ ಫಿಂಚ್‌ಗೆ ಈ ಲಾಭವನ್ನು ಹೆಚ್ಚು ಹೊತ್ತು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 7.1ನೆ ಓವರ್‌ನಲ್ಲಿ ಇಶಾಂತ್ ಶರ್ಮ ಎಸೆತವನ್ನು ಕೆಣಕಲು ಹೋಗಿ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿದರು.ನಾಯಕ ಸ್ಟೀವ್ ಸ್ಮಿತ್ ಕ್ರೀಸ್‌ಗೆ ಆಗಮಿಸಿ ಯಾವುದೇ ಒತ್ತಡಕ್ಕೆ ಒಳಗಾಗದೆ ಶಾನ್ ಮಾರ್ಷ್‌ಗೆ ಸಾಥ್ ನೀಡಿದರು. ಸ್ಮಿತ್(41) ಎರಡನೆ ವಿಕೆಟ್‌ಗೆ 64 ರನ್‌ಗಳ ಜೊತೆಯಾಟ ಒದಗಿಸಿದರು. ಇವರ ಜೊತೆಯಾಟ ನೆರವಿನಿಂದ ತಂಡದ ಸ್ಕೋರ್ 16ನೆ ಓವರ್‌ನಲ್ಲಿ 100ರ ಗಡಿ ದಾಟಿತು. ಮಾರ್ಷ್ ಅವರು ವಾರ್ನರ್ ಬದಲಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.ಜಡೇಜ ಅವರು ಸ್ಮಿತ್‌ಗೆ ಪೆವಿಲಿಯನ್‌ಗೆ ಹಾದಿ ತೋರಿಸಿದಾಗ ಭಾರತಕ್ಕೆ ಗೆಲುವಿನ ಆಸೆ ಚಿಗುರಿತ್ತು. ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಜಾರ್ಜ್ ಬೈಲಿ (23) ಅವರನ್ನು ನಾಯಕ ಧೋನಿ ಗುಡಗಲು ಬಿಡಲಿಲ್ಲ. ಮಿಚೆಲ್ ಮಾರ್ಷ್ (17) ರನೌಟಾದಾಗ ಸ್ಕೋರ್ 30 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 167ಕ್ಕೆ ಏರಿತ್ತು. ಮ್ಯಾಕ್ಸ್‌ವೆಲ್ 13ನೆ ಏಕದಿನ ಅರ್ಧಶತಕ ಪೂರ್ಣಗೊಳಿಸಿದರು. 7 ವಿಕೆಟ್‌ಗೆ ಮ್ಯಾಕ್ಸ್‌ವೆಲ್ ಮತ್ತು ಫಾಕ್ನರ್ 63 ಎಸೆತಗಳಲ್ಲಿ ಏಳನೆ ವಿಕೆಟ್‌ಗೆ 80 ರನ್ ಕಬಳಿಸಿದರು. ಗೆಲುವಿಗೆ ಇನ್ನೂ 1 ರನ್ ಅಗತ್ಯ ಇದ್ದಾಗ ಮ್ಯಾಕ್ಸ್‌ವೆಲ್ ಔಟಾದರು. ಇದರಿಂದಾಗಿ ಫಾಕ್ನರ್(ಔಟಾಗದೆ 21) ಗೆಲುವಿನ ರನ್ ಪುರ್ಣಗೊಳಿಸಿದರು.
  ಭಾರತ 295/6, ಕೊಹ್ಲಿ ಶತಕ: ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತದ ಭಾರತ ಪರ ವಿರಾಟ್ ಕೊಹ್ಲಿ ಶತಕ (117), ಶಿಖರ್ ಧವನ್(68) ಮತ್ತು ಅಜಿಂಕ್ಯ ರಹಾನೆ(50) ಅರ್ಧಶತಕಗಳ ಕೊಡುಗೆ ನೀಡಿದರು.
ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ಶತಕ ದಾಖಲಿಸಿದ್ದ ರೋಹಿತ್ ಶರ್ಮ (6) ಈ ಪಂದ್ಯದಲ್ಲಿ ಬೇಗನೆ ಔಟಾದರು. ಎರಡನೆ ವಿಕೆಟ್‌ಗೆ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ 119 ರನ್, ಮೂರನೆ ವಿಕೆಟ್‌ಗೆ ರಹಾನೆ ಮತ್ತು ವಿರಾಟ್ ಕೊಹ್ಲಿ 109ಗಳ ಜೊತೆಯಾಟ ನೀಡಿದರು.
ಕೊಹ್ಲಿ 169ನೆ ಏಕದಿನ ಪಂದ್ಯದಲ್ಲಿ 24ನೆ ಶತಕ ದಾಖಲಿಸಿದರು. 105 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ಸಹಾಯದಿಂದ ತನ್ನ ಶತಕ ಪೂರ್ಣಗೊಳಿಸಿದರು.
ಕೊಹ್ಲಿ ಔಟಾದ ಬಳಿಕ ಭಾರತದ ಎರಡು ವಿಕೆಟ್‌ಗಳು ಬೇಗನೆ ಉರುಳಿದ್ದವು, ಈ ಕಾರಣದಿಂದಾಗಿ ತಂಡದ ಸ್ಕೋರ್ 300ರ ಗಡಿ ದಾಟಲಿಲ್ಲ.
 ನಾಯಕ ಎಂ.ಎಸ್.ಧೋನಿ 9 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಇರುವ 23 ರನ್ , ಗುರುಕೀರತ್ ಸಿಂಗ್ 8 ರನ್, ರವೀಂದ್ರ ಜಡೇಜ ಔಟಾಗದೆ 6ರನ್, ಮತ್ತು ರಿಶಿ ಧವನ್ 3 ರನ್ ಗಳಿಸಿ ಮೊತ್ತವನ್ನು ಹಿಗ್ಗಿಸಿದರು.
 
ಸ್ಕೋರ್ ಪಟ್ಟಿ
ಭಾರತ ಮೊದಲ ಇನಿಂಗ್ಸ್ 50 ಓವರ್‌ಗಳಲ್ಲಿ 295/6
ರೋಹಿತ್ ಶರ್ಮ ಸಿ ವೇಡ್ ವಿ ರಿಚರ್ಡ್ಸನ್ 06
ಶಿಖರ್ ಧವನ್ ಬಿ ಹೇಸ್ಟಿಂಗ್ಸ್68
 ವಿರಾಟ್ ಕೊಹ್ಲಿ ಸಿ ಬೈಲಿ ಬಿ ಹೇಸ್ಟಿಂಗ್ಸ್117
ಅಜಿಂಕ್ಯ ರಹಾನೆ ಸಿ ಮ್ಯಾಕ್ಸ್‌ವೆಲ್ ಸಿ ಹೇಸ್ಟಿಂಗ್ಸ್50
ಎಂಎಸ್ ಧೋನಿ ಸಿ ಮ್ಯಾಕ್ಸ್‌ವೆಲ್ ಸಿ ಹೇಸ್ಟಿಂಗ್ಸ್23
ಗುರುಕೀರತ್ ಸಿಂಗ್‌ಬಿ ಫಾಕ್ನರ್08
 ರವೀಂದ್ರ ಜಡೇಜ ಔಟಾಗದೆ06
ರಿಶಿ ಧವನ್ ಔಟಾಗದೆ 03
ಇತರ14

ವಿಕೆಟ್ ಪತನ: 1-15, 2-134, 3-243, 4-265, 5-274, 6-288

ಬೌಲಿಂಗ್ ವಿವರ
ರಿಚರ್ಡ್ಸನ್10-0-48-1
ಹೇಸ್ಟಿಂಗ್ಸ್10-0-58-4
ಜೇಮ್ಸ್ ಫಾಕ್ನರ್10-0-63-2
ಎಸ್‌ಎಂ ಬೊಲೆಂಡ್ 09-0-63-0        
ಮ್ಯಾಕ್ಸ್‌ವೆಲ್09-0-46-0
ಮಿಚೆಲ್ ಮಾರ್ಷ್ 02-0-12-0

 ಆಸ್ಟ್ರೇಲಿಯ 48.5ಓವರ್‌ಗಳಲ್ಲಿ 7 ವಿಕೆಟ್‌ಗೆ 296
ಶಾನ್ ಮಾರ್ಷ್ ಸಿ ಧೋನಿ ಬಿ ಇಶಾಂತ್62
ಎಜೆ ಫಿಂಚ್ ಸಿ ಧೋನಿ ಬಿ ಯಾದವ್21
ಸ್ಟೀವ್ ಸ್ಮಿತ್ ಸಿ ರಹಾನೆ ಬಿ ಜಡೇಜ41
ಜಾರ್ಜ್ ಬೈಲಿ ಸ್ಟಂಪ್ಡ್ ಧೋನಿ ಬಿ ಜಡೇಜ23
ಮ್ಯಾಕ್ಸ್‌ವೆಲ್ ಸಿ ಧವನ್ ಬಿ ಯಾದವ್96
ಮಿಚೆಲ್ ಮಾರ್ಷ್ ರನೌಟ್(ಯಾದವ್/ಧೋನಿ)17
ವೇಡ್ ಸಿ ಶಿಖರ್ ಧವನ್ ಬಿ ಇಶಾಂತ್ 06
ಜೇಮ್ಸ್ ಫಾಕ್ನರ್ ಔಟಾಗದೆ21
ಹೇಸ್ಟಿಂಗ್ಸ್ ಔಟಾಗದೆ00
ಇತರೆ09
ವಿಕೆಟ್ ಪತನ: 1-48, 2-112, 3-150, 4-167, 5-204, 6-215, 7-295
ಬೌಲಿಂಗ್ ವಿವರ
ಯು. ಯಾದವ್ 09.5-0-68-2
ಸ್ರಾನ್ 08.0-0-63-0
 ಇಶಾಂತ್ ಶರ್ಮ 10.0-0-53-2
ಆರ್.ಜಡೇಜ10.0-0-49-2
ರಿಶಿ ಧವನ್06.0-0-33-0
ಗುರುಕೀರತ್ ಸಿಂಗ್05.0-0-27-0

ಪಂದ್ಯಶ್ರೇಷ್ಠ: ಗ್ಲೆನ್ ಮ್ಯಾಕ್ಸ್‌ವೆಲ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X