ಇಂದು ಸಂಜೆ 4ಕ್ಕೆ ಟಿಆರ್‌ಎಫ್ ಸೇವಾ ಉತ್ಸವ ಸಮಾರೋಪ, ಸಾಧಕರಿಗೆ ಸನ್ಮಾನ, ನಗೆ ಹಬ್ಬ

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್(ಟಿಆರ್‌ಎಫ್)ನ ದಶಮಾನೋತ್ಸವದ ಅಂಗವಾಗಿ ನಗರದ ಪುರಭವನದಲ್ಲಿ ಹಮ್ಮಿಕೊಂಡಿರುವ 3 ದಿನಗಳ ಕಾರ್ಯಕ್ರಮ ‘ಸೇವಾ ಉತ್ಸವ-2016’ ಇದರ ಸಮಾರೋಪ ಸಮಾರಂಭವು ಇಂದು ಸಂಜೆ 4 ಗಂಟೆಗೆ ಜರಗಲಿದೆ.
ಸೈಯದ್ ಅಲ್‌ಹಾದಿ ಇಬ್ರಾಹೀಂ ತಂಙಳ್ ಆತೂರು ಅವರ ದುಆದೊಂದಿಗೆ ಆರಂಭವಾಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಉಪಾಧ್ಯಕ್ಷ ಅಶ್ರಫ್ ಜಿ. ಬಾವ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಸಂಸದ ನಳಿನ್‌ಕುಮಾರ್ ಕಟೀಲು, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಉದ್ಯಮಿಗಳಾದ ಝಕರಿಯಾ ಜೋಕಟ್ಟೆ, ಸಯೀದ್ ಕರ್ನೀರೆ, ಬಿ.ಎಂ.ಫಾರೂಕ್, ಫಿರೋಝ್ ಅಬ್ದುಲ್ಲಾ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಇನ್‌ಲ್ಯಾಂಡ್ ಬಿಲ್ಡರ್ಸ್‌ನ ಎಂ.ಡಿ. ಸಿರಾಜ್ ಅಹ್ಮದ್, ಆಝಾದ್ ಹಾರ್ಡ್‌ವೇರ್‌ನ ಎಂ.ಡಿ. ಮನ್ಸೂರ್ ಅಹ್ಮದ್, ಬಿಡಬ್ಲುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಬಿಸಿಎಫ್ ದುಬೈ ಅಧ್ಯಕ್ಷ ಬಿ.ಕೆ.ಯೂಸುಫ್, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ, ವೈಟ್‌ಸ್ಟೋನ್ ಡೆವಲಪರ್ಸ್‌ನ ಎಂ.ಡಿ. ಮುಹಮ್ಮದ್ ಶರೀಫ್, ಬರಾಕಃ ಇಂಟರ್‌ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಅಶ್ರಫ್ ಬಜ್ಪೆ, ಎಸ್‌ಡಿಪಿ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಕಾರ್ಪೊರೇಟರ್ ರಿಯಾಝ್ ಬಾವ, ಉದ್ಯಮಿಗಳಾದ ಇಸ್ಮಾಯೀಲ್ ಕಲ್ಲಡ್ಕ, ಅಹ್ಮದ್ ಶರೀಫ್ ಭಾಗವಹಿಸುವರು.
ಸಾಧಕರಿಗೆ ‘ಟ್ಯಾಲೆಂಟ್ ನ್ಯಾಷನಲ್ ಐಕಾನ್-2016’ ಪ್ರಶಸ್ತಿ
ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ 10 ಮಂದಿ ಸಾಧಕರಾದ ಯೆನೆಪೊಯ ವಿವಿಯ ಕುಲಾಧಿಪತಿ ಹಾಜಿ ವೈ.ಅಬ್ದುಲ್ಲ ಕುಂಞಿ, ಐಎಲ್‌ಎಂಇ ಚೆನ್ನೈ ಇದರ ಸ್ಥಾಪಕ ವೌಲಾನ ಶಂಸುದ್ದೀನ್ ಖಾಸಿಮಿ, ವಿಶ್ವದ ಅತ್ಯಂತ ಕಿರಿಯ ಪ್ರಾಂಶುಪಾಲ ಪಶ್ಚಿಮ ಬಂಗಾಲದ ಬಾಬರ್ ಅಲಿ, ಯುಪಿಎಸ್‌ಸಿ 2013ರಲ್ಲಿ 80ನೆ ರ್ಯಾಂಕ್ ವಿಜೇತ ಐಎಎಸ್ ಅಧಿಕಾರಿ ಹೈದರಾಬಾದ್‌ನ ಮುಶರ್ರಫ್ ಅಲಿ ಫಾರೂಕಿ, ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋಲಾಜಿ ಇದರ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರ ಸೈಯದ್ ಕಿರ್ಮಾನಿ, ದಕ್ಷಿಣ ಭಾರತದ ಪ್ರಥಮ ಮುಸ್ಲಿಮ್ ಮಹಿಳಾ ಪೈಲಟ್ ಸಾರಾ ಹಮೀದ್, ಬೆಂಗಳೂರಿನ ಹೋಮ್ ಆಫ್ ಹೋಪ್ ಇದರ ಅಧ್ಯಕ್ಷ ಟಿ.ರಾಜಾ(ಆಟೊ ರಾಜಾ), ಎಚ್‌ಕೆಎಚ್ ಮತ್ತು ಎ.ಕೆ.ಗ್ರೂಪ್‌ನ ಮಾಲಕ ಕೆ.ಅಬ್ದುಲ್ ಕರೀಮ್ ಸಿರಸಿ ಹಾಗೂ ಹೊಸದಿಲ್ಲಿಯ ರಿಹಾಬ್ ಇಂಡಿಯಾ ಫೌಂಡೇಶನ್‌ಗೆ ‘ಟ್ಯಾಲೆಂಟ್ ನ್ಯಾಷನಲ್ ಐಕಾನ್-2016’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ನಗೆಹಬ್ಬ:
ಸಭಾ ಸಮಾರಂಭದ ಬಳಿಕ ‘ನಗೆಹಬ್ಬ’ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ನಕ್ಕು ನಗಿಸಲು ಬರಲಿದ್ದಾರೆ ಚುಟುಕು ಕವಿಯೂ ಆಗಿರುವ ಎಚ್.ದುಂಡಿರಾಜ್ ಹಾಗೂ ಸಾಹಿತಿ ಎಂ.ಎಸ್.ನರಸಿಂಹ ಮೂರ್ತಿ, ಬೆಂಗಳೂರು ಅವರು.
ಬಳಿಕ ಹುಸೈನ್ ಕಾಟಿಪಳ್ಳ ಮತ್ತು ಬಳಗದಿಂದ ಬ್ಯಾರಿ ಸಾಂಸ್ಕೃತಿಕ ಕಾರ್ಯಗಳು ನಡೆಯಲಿವೆ.







